ರಾಬರ್ಟ್ ಟೀಂನಿಂದ ರಾಮನವಮಿ ಗಿಫ್ಟ್

385

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಮೂವಿಯ ಜೈ ಶ್ರೀರಾಮ ಹಾಡನ್ನ ಈ ಹಿಂದೆಯೇ ಕೇಳಿದ್ದೀರಿ. ಆದ್ರೆ, ಇವತ್ತು ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಹೊಸ ವರ್ಸನ್ ಬಿಟ್ಟಿದ್ದು, ಕೆಲ ಗಂಟೆಯಲ್ಲಿಯೇ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಈ ಹಿಂದೆ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿತ್ತು. ಅರ್ಜುನ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡಿಗೆ ದಿವ್ಯಕುಮಾರ ಹಾಡಿದ್ರು. ಇದೀಗ ಅದೆ ಹಾಡನ್ನ ಖ್ಯಾತ ಗಾಯಕ ಶಂಕರ ಮಹಾದೇವನ್ ಅವರಿಂದ ಹಾಡಿಸಿದ್ದು, ಹೊಸ ವರ್ಸನ್ ಸಹ ರಿಲೀಸ್ ಮಾಡಲಾಗಿದೆ.

ಈ ಹಿಂದೆ ಬಿಡುಗಡೆ ಮಾಡಿದ್ದ ಲಿರಿಕಲ್ ವಿಡಿಯೋಗಿಂತ ಇದು ಮತ್ತಷ್ಟ ಜೋರಾಗಿದ್ದು, ಮೇಕಿಂಗ್ ವಿಡಿಯೋ ಮಿಕ್ಸ್ ಮಾಡಲಾಗಿದೆ. ಡಿ ಬಾಸ್ ಅಭಿಮಾನಿಗಳು ಈ ಹಾಡನ್ನ ಸಹ ಅಷ್ಟೇ ಮೆಚ್ಚಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!