ಯಶಸ್ಸು ಕಂಡ ಪ್ರಜಾಸ್ತ್ರ ‘ರೊಟ್ಟಿ ಅಭಿಯಾನ’

870

ಸಿಂದಗಿ: ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೆರವಿನ ಮಹಾಪೂರ ಹರಿದು ಬರ್ತಿದೆ. ನಾಡಿನ ಮೂಲೆ ಮೂಲೆಯಿಂದ ದಾನಿಗಳು ನಿರಾಶ್ರಿತರ ನೆರವಿಗೆ ನಿಂತಿದ್ದಾರೆ. ರಕ್ಷಣಾ ಕಾರ್ಯದಿಂದ ಹಿಡಿದು ಅವರ ಹೊಟ್ಟೆ, ಬಟ್ಟೆಗಾಗಿ ಅಗತ್ಯ ವಸ್ತುಗಳನ್ನ ಸಂಗ್ರಹಿಸಿಕೊಡಲಾಗ್ತಿದೆ. ಇದರ ನಡುವೆ ಪ್ರಜಾಸ್ತ್ರ ಮತ್ತು ನಿಮಗಾಗಿ ಟೆಕ್ನಾಲಜಿ, ಸಾಫ್ಟ್ ಸೊಲಿನ್, ಕುರುಬರ ಸಂಘದ ತಾಲೂಕು ಘಟಕದ ವತಿಯಿಂದ ಮನೆಗೆ ಎರಡು ‘ರೊಟ್ಟಿ ಅಭಿಯಾನ’ ನಡೆಸಲಾಯ್ತು.

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಕನಕದಾಸ ಸರ್ಕಲ್ ನಿಂದ ಭಾನುವಾರ ಸಂಜೆ 7.30ಕ್ಕೆ ಶುರುವಾದ ಅಭಿಯಾನ ರಾತ್ರಿ 9.30ರ ತನಕ ನಡೆಯಿತು. ಗೌಡರ ಓಣಿ, ಪೂಜಾರಿಗಳ ಓಣಿ, ಲಿಂಗಾಯತರ ಓಣಿ, ರೋಡಗಿರ ಓಣಿ, ಅಂಬೀಗರ ಚೌಡಯ್ಯನ ಗಲ್ಲಿಯ ಭೂತಿನವರ ಓಣಿ ಸೇರಿದಂತೆ ಸುತ್ತಲಿನ ಬಡಾವಣೆಯ ಸುಮಾರು 500ಕ್ಕೂ ಹೆಚ್ಚು ಮನೆಗಳಿಂದ 1,500ಕ್ಕೂ ಹೆಚ್ಚು ರೊಟ್ಟಿಗಳನ್ನ ಸಂಗ್ರಹಿಸಲಾಯ್ತು.

ಅಭಿಯಾನದಲ್ಲಿ ಮನೆಗೆ ಎರಡು ರೊಟ್ಟಿ ಅಂತಾ ಹೇಳಿದ್ರೂ, ಜನರು ಒಂದೊಳ್ಳೆ ಕಾರ್ಯಕ್ಕೆ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ರೊಟ್ಟಿಗಳನ್ನ ನೀಡುವ ಮೂಲಕ ಮಾನವೀಯತೆ ಮೈರೆದರು. ಈ ಒಂದು ಕಾರ್ಯವನ್ನ ‘ಉತ್ತರ ಕರ್ನಾಟಕ ಮನಸ್ಸುಗಳು’ ಅನ್ನೋ ಮೀಮ್ಸ್ ತಂಡ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಒಂದು ವಿನೂತನ ಅಭಿಯಾನದಲ್ಲಿ ಮಲ್ಲು ಹಿರೋಳ್ಳಿ, ರಾಘವೇಂದ್ರ ಜೋಶಿ, ಲಕ್ಕಪ್ಪ ಬೀರಗೊಂಡ, ಸಿದ್ದು ಹದ್ದನೂರ, ಸಂಜೀವಕುಮಾರ ಡಾಂಘಿ, ರಾಘು ಕುಲ್ಕರ್ಣಿ, ಸಾಯಿಬಣ್ಣ ಹದ್ದನೂರ, ರಾಮಾಚಾರಿ, ಶಿವು ಹಿರೇಕುರಬರ, ಶ್ರೀಶೈಲ ಬೀರಗೊಂಡ, ವಿಕಾಸ ಬೀರಗೊಂಡ, ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಸೇರಿ ಮನೆ ಮನೆಗೆ ಹೋಗಿ ರೊಟ್ಟಿ ಸಂಗ್ರಹಿಸಿದ್ರು.




Leave a Reply

Your email address will not be published. Required fields are marked *

error: Content is protected !!