ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಪೋರ್ನ್ ನಟಿಗೆ 33 ಲಕ್ಷ ರೂಪಾಯಿ ಕೊಡಬೇಕಿದೆ. ಸ್ಟಾರ್ಮಿ ಡೇನಿಯಲ್ಸ್ ಅನ್ನೋ ಪೋರ್ನ್ ನಟಿಗೆ ಟ್ರಂಪ್ 33 ಲಕ್ಷ ರೂಪಾಯಿ ಕೊಡಬೇಕೆಂದು ಕೋರ್ಟ್ ಆದೇಶಿಸಿದೆ.
41 ವರ್ಷದ ಸ್ಟಾರ್ಮಿ, ಟ್ರಂಪ್ ಜೊತೆಗೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾಳೆ. ಈ ಸಂಬಂಧ ದೂರು ನೀಡಿದ್ಳು. ಬಳಿಕ ಅದನ್ನ ವಾಪಸ್ ಪಡೆದಿದ್ದಾಳೆ. ಇದಕ್ಕೆ ಆಕೆ ಖರ್ಚು ಮಾಡಿದ ಹಣವನ್ನ ಟ್ರಂಪ್ ನೀಡಬೇಕಾಗಿದೆ. ಹೀಗಾಗಿ 33 ಲಕ್ಷ ರೂಪಾಯಿ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ಟಾರ್ಮಿ, ಇದು ನನ್ನ ಗೆಲುವು ಎಂದಿದ್ದಾಳೆ.
ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಸ್ಟಾರ್ಮಿ ಹೇಳುತ್ತಲೆ ಬಂದಿದ್ಳು. ಆದ್ರೆ, ಅಧ್ಯಕ್ಷ ಟ್ರಂಪ್ ಇದನ್ನ ಒಪ್ಪಿಕೊಂಡಿಲ್ಲ. ಬಳಿಕ ಪೋರ್ನ್ ನಟಿ ಪುಸ್ತಕವೊಂದು ಬರೆದ್ಳು. ಅದರಲ್ಲಿ ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದಾಳೆ.