ಭಾರತಕ್ಕೆ ದೊಡ್ಡಣ್ಣ ಬೆದರಿಕೆ: ಮೋದಿ ಬೆನ್ನಿಗೆ ನಿಂತ ರಾಗಾ, ತರೂರ್

1409

ನವದೆಹಲಿ: ಕರೋನಾವನ್ನ ಮಟ್ಟ ಹಾಕಲು ಮಲೇರಿಯಾಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ. ಈ ವಿಚಾರ ಸಂಬಂಧ ಭಾರತಕ್ಕೆ ಬೆದರಿಕೆ ಹಾಕಿರುವ ಟ್ರಂಪ್ ವಿರುದ್ಧ ಸಂಸದ, ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ ಕಿಡಿ ಕಾರಿದ್ದಾರೆ. ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿರುವ ರಾಹುಲ ಗಾಂಧಿ, ಮೊದಲು ಭಾರತೀಯರಿಗೆ ಸಿಗುವಂತಾಗ್ಲಿ. ಪ್ರತೀಕಾರ ತೀರಿಸಿಕೊಳ್ಳಲು ಯಾರೂ ಸ್ನೇಹ ಮಾಡುವುದಿಲ್ಲವೆಂದು ಟ್ರಂಪ್ ವಿರುದ್ಧ ಆಕ್ರೋಶ ಹೊರ ಹಾಕುವ ಮೂಲಕ ಮೋದಿ ಬೆಂಬಲಕ್ಕೆ ನಿಂತಿದ್ದಾರೆ.

ಮಾನವೀಯ ನೆಲೆಯಲ್ಲಿ ಟ್ರಂಪ್ ಮನವಿ ಮಾಡಬೇಕು. ಹೈಡ್ರಾಕ್ಸಿಕ್ಲೋರಿಕ್ವಿನ್ ಸೇರಿದಂತೆ 22 ಮಾದರಿಯ ಮಾತ್ರೆಗಳನ್ನ ರಪ್ತು ಮಾಡುವುದಕ್ಕೆ ಭಾರತ ಒಪ್ಪಿಕೊಂಡಿರುವುದಕ್ಕೆ ಸ್ವಾಗತ. ಆದ್ರೆ, ಮೊದಲು ಭಾರತೀಯರಿಗೆ ಅದು ಲಭ್ಯವಾಗಬೇಕು ಅನ್ನೋ ಸಲಹೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ಶಶಿ ತರೂರ್, ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ದೇಶದ ವಿರುದ್ಧ ಹೀಗೆ ಬೆದರಿಕೆ ಹಾಕುವುದು ನಾನು ಎಲ್ಲಿಯೂ ನೋಡಿಲ್ಲ ಎಂದಿದ್ದಾರೆ. ದೇಶದವೊಂದರ ಮುಖ್ಯಸ್ಥರು ಹೀಗೆ ಇನ್ನೊಂದು ದೇಶಕ್ಕೆ ಬೆದರಿಕೆ ಹಾಕವುದು ನೋಡಿಯೇ ಇಲ್ಲ. ಹೈಡ್ರಾಕ್ಸಿಕ್ಲೋರಿಕ್ವಿನ್ ಭಾರತ ಪೂರೈಕೆ ಮಾಡುವ ದೇಶ. ಅದು ಮಾರಾಟ ಮಾಡಿದ್ರೆ ಮಾತ್ರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕರೋನಾ ವಿರುದ್ಧ ಸಧ್ಯ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ. ಅಮೆರಿಕಾಗೆ ರಪ್ತು ಮಾಡುವುದು ಸಹ ಭಾರತ. ಈ ಸಂಬಂಧ ಸೋಮಾರ ಮಾತ್ನಾಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಮೋದಿಯೊಂದಿಗೆ ಮಾತ್ನಾಡಿದ್ದೇನೆ. ಅವರು ನಮ್ಗೆ ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಿ ನೀಡುವ ವಿಚಾರದಲ್ಲಿ ಕೈಜೋಡಿಸ್ತಾರೆ ಎಂದುಕೊಂಡಿದ್ದೇನೆ. ಇಲ್ದೆ ಹೋದ್ರೆ ಪ್ರತಿಕಾರ ಇದ್ದೇ ಇರುತ್ತೆ ಅನ್ನೋ ಬೆದರಿಕೆ ಹಾಕಿದ್ರು. ಯುಎಸ್ಎ ನಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡ್ರೆ 10 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!