ನೇಸರನ ಕಿರಣಗಳೇ ಈಕೆಗೆ ಮುಳ್ಳು.. ವಿರಳ ರೋಗದ ಯುವತಿಯ ನರಕದ ಕಥೆ

407

ಈ ಬದುಕು ಎಲ್ಲರೂ ಅಂದುಕೊಂಡಂತೆ ಇರಲ್ಲ. ಎಲ್ಲವೂ ಇದ್ದೂ ಏನೂ ಇಲ್ಲ ಅನ್ನೋ ಖಾಲಿತನ. ಏನೂ ಇಲ್ಲದೆಯೂ ಎಲ್ಲವೂ ಇದೆ ಅನ್ನೋ ಭಾವನೆ ನಡುವೆ ಬದುಕಿನ ಪಯಣ ಸಾಗುತ್ತೆ. ಈ ಪಯಣದಲ್ಲಿ ಸುಂದರ ಜೀವನವಿದೆ. ಕಣ್ಣೀರ ಕಥೆಯಿದೆ. ನವಿರಾದ ಪ್ರೀತಿಯಿದೆ. ನಿತ್ಯ ಕೊಲ್ಲುವ ದಾರುಣತೆಯಿದೆ. ಇಂಥಾ ಬದುಕನ್ನ ನಾವು ಹೇಗೆ ಸ್ವೀಕರಿಸ್ತೀವಿ ಅನ್ನೋದರ ಮೇಲೆ ನಮ್ಮ ಕಾಲ ನಿರ್ಣಯವಾಗುತ್ತೆ.

ಈಕೆಯನ್ನ ನೋಡಿದ್ರೆ ಬಹುತೇಕರಿಗೆ ಅಸಹ್ಯ ಅನಿಸುತ್ತೆ. ಕೆಲವರಿಗೆ ಅಯ್ಯೋ ಪಾಪ ಅನಿಸುತ್ತೆ. ಮಕ್ಕಳು ನೋಡಿದರೆ ಹೆದರಿಕೊಳ್ಳುತ್ತವೆ. ಯಾಕಂದ್ರೆ, ಈಕೆಯ ದೇಹ ಅಷ್ಟೊಂದು ವಿಕಾರವಾಗಿದೆ. ಹೀಗಾಗಿಯೇ ಈಕೆಯನ್ನ ಅನೇಕರು ಝೂಂಬಿ ಎಂದು ಕರೆದಿದ್ದಾರೆ. ಬ್ರೆಜಿಲ್ ಭಾಷೆಯಲ್ಲಿ ಝೂಂಬಿ ಅಂದ್ರೆ ವಿಕಾರ ರೂಪದಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ಭೂತ. ಇಷ್ಟೊಂದು ಪೀಠಿಕೆ ಯಾಕೆಂದ್ರೆ, ಯಾವುದೋ ಸಣ್ಣಪುಟ್ಟ ಸಮಸ್ಯೆಗೆ, ಅನಾರೋಗ್ಯಕ್ಕೆ ಸಾವಿಗೆ ಶರಣಾಗುವವರು ಈಕೆಯ ಬದುಕನ್ನ ನೋಡಿ ಕಲಿಯಬೇಕು.

ಬ್ರೆಜಿಲ್ ನ ಪೋರ್ಟಲೆಝಾದ ನಿವಾಸಿ. 29 ವರ್ಷದ ಕರೈನ್ ಡಿಸೋಜಾ ಎಲ್ಲ ಹೆಣ್ಮಕ್ಕಳಂತೆ ಜೀವನ ನಡೆಸಬೇಕು ಅಂದ್ರೆ ಆಗದು. ಸೂರ್ಯನ ಎಳೆ ಬಿಸಿಲನ್ನ ಆಸ್ವಾದಿಸಬೇಕು ಅಂದ್ರೆ ಅದು ಸಾವಿನ ಮನೆಗೆ ಹೋದಂತೆ. ಯಾಕಂದ್ರೆ ಕರೈನ್ ಅತೀ ವಿರಳ ಚರ್ಮ ಸಮಸ್ಯೆಯಾದ ಕ್ಸೀರೋಡರ್ಮಾ ಪಿಗ್ಮೆಂಟೋಸಮ್ ನಿಂದ ಬಳಲುತ್ತಿದ್ದಾಳೆ. ಅಂದ್ರೆ ಸೂರ್ಯನ ಕಿರಣಗಳು ಈಕೆಯ ಮೈಗೆ ಸೋಕಿದ್ರೆ ಚರ್ಮದ ಕ್ಯಾನ್ಸರ್ ಬರುತ್ತೆ. ಡಿಎನ್ಎ ವರದಿಯಲ್ಲಿ ಚರ್ಮಕ್ಕಾದ ಹಾನಿಯನ್ನ ಸ್ವಯಂ ಕಡಿಮೆಮಾಡಿಕೊಳ್ಳುವ ಶಕ್ತಿ ಇವಳ ದೇಹದಲ್ಲಿ ಇಲ್ಲ. ಹೀಗಾಗಿ ಸೂರ್ಯ ಈಕೆ ಪಾಲಿಗೆ ಯಮನಂತೆ.

ಕೇವಲ 3 ವರ್ಷದವಳಿದ್ದಾಗ ಕೈರನ್ ಗೆ ಈ ರೋಗ ಕಾಣಿಸಿಕೊಂಡಿದೆ. ಇಲ್ಲಿಯವರೆಗೂ ಸುಮಾರು 130 ಸರ್ಜರಿ ಮಾಡಿಸಿಕೊಂಡಿದ್ದಾಳೆ. ಇದ್ರಿಂದಾಗಿ ಕೆಳತುಟಿ ಹಾಗೂ ಮೂಗಿನ ಒಂದು ಭಾಗ ಕಳೆದುಕೊಂಡಿದ್ದಾಳೆ. ಪ್ರತಿ 2 ಗಂಟೆಗೊಮ್ಮೆ SPF100 ಸನ್ ಸ್ಕ್ರೀನ್ ಹೆಚ್ಚಲೇಬೇಕು. ಇಷ್ಟೊಂದು ನೋವು, ಅವಮಾನದಲ್ಲೂ ಬದುಕಬೇಕು ಅನ್ನೋ ಛಲ. ಮಾಸದ ಆಕೆಯ ನಗು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕು.

ಕೈರನ್ ಬದುಕಿನಲ್ಲೂ ನವಿರಾದ ಪ್ರೇಮ

ಇಂಥಾ ಸಮಸ್ಯೆಯನ್ನ ಎದುರಿಸ್ತಿರುವ ಕೈರನ್ ಬದುಕಿನಲ್ಲಿಯೂ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಎಡ್ಮಿಲಸನ್ ಪರಿಚಯವಾಗಿದೆ. ಈಕೆಯ ಆತ್ಮಸ್ಥೈರ್ಯ, ಬದುಕಿನ ಬಗ್ಗೆ ಇರುವ ದೃಢ ವಿಶ್ವಾಸಕ್ಕೆ ಮೆಚ್ಚಿ ಇಷ್ಟಪಟ್ಟಿದ್ದಾನೆ. ವಿವಾಹ ಸಹ ಆಗಿದ್ದಾನೆ. ಇದನ್ನ ಎಷ್ಟೋ ಜನ ಆಕೆಗೆ ಬಹಳ ಆಸ್ತಿ ಇರಬೇಕು. ಹೀಗಾಗಿ ಮದ್ವೆಯಾಗಿರಬೇಕು ಎಂದಿದ್ದಾರಂತೆ. ಕೈರನ್ ಳನ್ನ ಎಡ್ಮಿಲಸನ್ ನ ಶುಗರ್ ಬೇಬಿ ಎಂದಲ್ಲ ಆಡಿಕೊಳ್ತಾರಂತೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಇರೋದು ಒಂದು ಲೈಫ್. ಅದನ್ನ ಖುಷಿಯಿಂದ ಕಳೆಯೋಣ ಅನ್ನೋ ಈಕೆಯ ಗಟ್ಟಿತನ ಮೆಚ್ಚಲೇಬೇಕು.




Leave a Reply

Your email address will not be published. Required fields are marked *

error: Content is protected !!