ನಿವೃತ್ತ ಸಿಜೆಐ ಬಿಜೆಪಿ ಸಿಎಂ ಅಭ್ಯರ್ಥಿಯಾ?

328

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ ಗೊಗೊಯಿ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳಲಾಗ್ತಿದೆ. ಮುಂದಿನ ವರ್ಷ ಅಸ್ಸಾಂ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಮಾಜಿ ಸಿಜೆಐ ಗೊಗೊಯಿ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ತರುಣ
ಗೊಗೊಯಿ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಸಿಎಂ ಅಭ್ಯರ್ಥಿ ಯಾರಾಗಬೇಕು ಅನ್ನೋ ಲಿಸ್ಟ್ ನಲ್ಲಿ ರಂಜನ ಗೊಗೊಯಿ ಅವರ ಹೆಸರು ಇರುವುದಾಗಿ ಕೆಲ ಮೂಲಗಳಿಂದ ತಿಳಿದು ಬಂದಿದೆ ಎಂದು ಕಾಂಗ್ರೆಸ್ ನಾಯಕ ತರುಣ ಗೊಗೊಯಿ ಹೇಳಿದ್ದಾರೆ. ನಿವೃತ್ತ ಸಿಜೆಐ ರಾಜ್ಯಸಭೆಗೆ ಆಯ್ಕೆ ಆಗಲು ಒಪ್ಪಿಕೊಂಡಿದ್ದಾರೆ ಅಂದ್ರೆ, ಸಿಎಂ ಆಗಲು ಒಪ್ಪಬಹುದು ಎಂದು ತರುಣ
ಗೊಗೊಯಿ ಕುಟುಕಿದ್ದಾರೆ.

126 ವಿಧಾನಸಭೆ ಸದಸ್ಯ ಬಲ ಹೊಂದಿರುವ ಅಸ್ಸಾಂನಲ್ಲಿ 2016ರಲ್ಲಿ ನಡೆದ ಚುನುವಾಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿರ್ಲಿಲ್ಲ. ಎಜಿಪಿ, ಬಿಪಿಎಫ್ ಹಾಗೂ ಪಕ್ಷೇತರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ.




Leave a Reply

Your email address will not be published. Required fields are marked *

error: Content is protected !!