ಪ್ರಜಾಸ್ತ್ರ ಸುದ್ದಿ
ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಗಾನ ಗಂಧರ್ವ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಬಹುದೊಡ್ಡ ಶಾಕ್ ನೀಡಿದಂತಾಗಿದೆ.
ಕೋವಿಡ್ 19ನಿಂದ ಬಳಲುತ್ತಿದ್ದ ಎಸ್ಪಿಬಿ ಮನೆಗೆ ಮರಳುವ ಆಸೆಯನ್ನ ತುಂಬಾ ಹೊತ್ತುಕೊಂಡಿದ್ರು. ಆದ್ರೆ, ವಿಧಿ ಬೇರೆಯದೆ ಆಟವಾಡಿದೆ. ಹೀಗಾಗಿ ಕೋಟ್ಯಾಂತರ ಅಭಿಮಾನಿಗಳನ್ನ ಬಿಟ್ಟು 74 ವರ್ಷದ ಎಲ್ಲರ ನೆಚ್ಚಿನ ಎಸ್ಪಿಬಿ ಇಹಲೋಕ ಬಿಟ್ಟು ನಡೆದಿದ್ದಾರೆ.