ದೀಪಿಕಾ, ಸಾರಾ, ರಕುಲ್, ಶ್ರದ್ಧಾ ವಿಚಾರಣೆ: ಮಾಳ್ವಿಕಾ ಟ್ವೀಟ್

287

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡ್ತಿರುವ ಡ್ರಗ್ಸ್ ಮಾಫಿಯಾ ಬಾಲಿವುಡ್ ದುನಿಯಾದಲ್ಲಿಯೂ ಹಲವರಿಗೆ ಸಂಕಷ್ಟ ತಂದಿದೆ. ನಟ ಸುಶಾಂತ ಸಿಂಗ್ ರಾಜಪೂತ್ ಸಾವಿನ ಬಳಕಿ, ನಶೆ ಮತ್ತು ಹಲವರನ್ನ ಬಲೆಗೆ ಬೀಳಿಸಿದೆ. ಹೀಗಾಗಿ ಪೊಲೀಸರು ಬಿಟೌನ್ ದುನಿಯಾದ ಸ್ಟಾರ್ ನಟ, ನಟಿಯರಿಗೆ ನೋಟಿಸ್ ನೀಡ್ತಿದ್ದಾರೆ.

ಶನಿವಾರ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಕಾನ್, ರಕುಲ್ ಪ್ರೀತಿ ಸಿಂಗ್, ಶ್ರದ್ಧಾ ಕಪೂರ್ ವಿಚಾರಣೆಗೆ ಹಾಜರಾಗಲಿದ್ದಾರೆ. ಖಿನ್ನತೆಯಿಂದ ಹೊರ ಬರಲು ಏನು ಮಾಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ದೀಪಿಕಾ ಪಡುಕೋಣೆ ಹೇಳಿದ್ರು. ಅದೆ ಆಕೆಗೆ ಈಗ ಮುಳುವಾಗಿದೆ ಎನ್ನಲಾಗ್ತಿದೆ.

ಈ ಟ್ವೀಟ್ ಮಾಡಿರುವ ನಟಿ, ರಾಜಕಾರಣಿ ಮಳ್ವಿಕಾ ಅವಿನಾಶ, ಖಿನ್ನತೆ ಎಂದು ಕಥೆ ಕಟ್ಟಿದ ನಟಿಯ ಮಾಲ್ ಬಣ್ಣ ಬಯಲಾಗ್ತಿದೆ. ಆ ಮಾಲ್ ಹೊಗೆ ಅವರನ್ನ ಆವರಿಸಿಕೊಂಡಿದೆ. ಇವರನ್ನ ರೋಲ್ ಮಾಡೆಲ್ ಎಂದು ಫಾಲೋ ಮಾಡುವವರಿಗೆ ಇದು ನಿಜಕ್ಕೋ ಬೇಸರದ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!