‘ಸಹಬಾಳ್ವೆ’ 5ನೇ ವಸಂತಕ್ಕೆ ವಿಶೇಷ ಕಾರ್ಯಕ್ರಮ

473

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಸಹಬಾಳ್ವೆ ಸಂಸ್ಥೆ ಪ್ರಾರಂಭವಾಗಿ ಆಗಸ್ಟ್ 15ಕ್ಕೆ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಇದರ ಪ್ರಯುಕ್ತ ಅಂದು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತವನ್ನ ಆಯೋಜನೆ ಮಾಡಲಾಗಿದೆ. ಅಂದು ವಿಧೂಷಿ ದೀಪಾರಾವ್ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಹಬಾಳ್ವೆ ಸಂಸ್ಥಾಪಕ ಡಾ. ರಾಘವೇಂದ್ರ ಪ್ರಸಾದ

ಪ್ರತಿ ಶನಿವಾರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಮೂಲಕ ಸಂಗೀತದ ವಿವಿಧ ಪ್ರಕಾರಗಳನ್ನ ಸಂಗೀತ ಪ್ರಿಯರಿಗೆ ಉಣ ಬಡಿಸುತ್ತಾ ಬಂದಿದೆ. ಇದರ ಜೊತೆಗೆ ಸಮಾಜಮುಖಿ ಕಾರ್ಯಗಳನ್ನ ಮಾಡಲಾಗ್ತಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಾಗಿ ಹತ್ತು ಹಲವು ವಿಶೇಷ ಶಿಬಿರಗಳನ್ನ ಆಯೋಜಿಸಿಕೊಂಡು ಬರಲಾಗ್ತಿದೆ.

ಇನ್ನು ಕೋವಿಡ್ 19 ಸಂದರ್ಭದಲ್ಲಿ ನಾಡಿನ ಹಲವು ಜಿಲ್ಲೆಗಳಲ್ಲಿರುವ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಧನಸಹಾಯ ನೀಡಲಾಗಿದೆ. ಮಾಸ್ಕ್, ಸ್ಯಾನ್ ಟೈಸರ್ ವಿತರಿಸಲಾಗಿದೆ. ಆನ್ಲೈನ್ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಡ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಶುಲ್ಕ ಭರಿಸುವ ಉದ್ದೇಶ ಸಂಸ್ಥೆ ಹೊಂದಿದೆ ಎಂದು ಸಂಸ್ಥಾಪಕರಾದ ಡಾ.ರಾಘವೇಂದ್ರ ಪ್ರಸಾದ ಅವರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!