ಪ್ರೇಯಸಿಯನ್ನೇ ಕಿಡ್ನಾಪ್ ಮಾಡಿದ

597

ಪ್ರಜಾಸ್ತ್ರ ಅಪರಾಧ ಸುದ್ದಿ

ಕೋಲಾರ: ಹಾಡಹಗಲೇ ಯುವತಿಯನ್ನ ಕಿಡ್ನಾಪ್ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. ನಗರದ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕ್ ಬಳಿ ಈ ಘಟನೆ ನಡೆದಿದೆ. ನೋಡ್ ನೋಡ್ತಿದ್ದಂತೆ ಯುವತಿಯನ್ನ ಹೊತ್ತುಕೊಂಡು ಹೋಗಲಾಗುತ್ತೆ. ಇದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನೋವಾ ಕಾರಿನಲ್ಲಿ ಬಂದವರು ಕ್ಷಣ ಮಾತ್ರದಲ್ಲಿಯೇ ಯುವತಿಯನ್ನ ಕಿಡ್ನಾಪ್ ಮಾಡಿದ್ದಾರೆ. ಈ ಕಿಡ್ನಾಪ್ ಹಿಂದೆ ಇರುವುದು ಪ್ರೀತಿ. ಯೆಸ್, ಕಿಡ್ನಾಪ್ ಆದ ಹುಡ್ಗಿ ಕಿಡ್ನಾಪ್ ಮಾಡಿದ ಶಿವ ಎಂಬಾತ ಪ್ರೀತಿ ಮಾಡ್ತಿದ್ರು. ಯುವತಿ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿಲ್ಲ. ಪ್ರೀತಿಸಿದವಳನ್ನ ಬಿಟ್ಟು ಕೊಡಲು ಆಗದೆ ಯುವಕ ಶಿವ, ಸಿರಿಶಾಳನ್ನ ಕಿಡ್ನಾಪ್ ಮಾಡಿದ್ದು, ಗಲ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.

ತಂಗಿಯೊಂದಿಗೆ ನಡೆದುಕೊಂಡು ಹೋಗ್ತಿದ್ದ ಟೈಂನಲ್ಲಿ ಇನೋವಾ ಕಾರಿನಲ್ಲಿ ಬಂದ ಶಿವ ಹಾಗೂ ಆತನ ಸ್ನೇಹಿತರು ಕಿಡ್ನಾಪ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಾರಿನಲ್ಲಿ ನಾಲ್ವರು ಇದ್ದರು ಎನ್ನಲಾಗ್ತಿದ್ದು, ಯುವತಿಯ ಪೋಷಕರು ಮಗಳನ್ನ ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!