ಸಲಾರ್ ವಿವಾದ: ನಿರ್ದೇಶಕರು ಹೇಳಿದ್ದೇನು?

283

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಉಗ್ರಂ, ಕೆಜಿಎಫ್ ಖ್ಯಾತಿ ನಿರ್ದೇಶಕ ಪ್ರಶಾಂತ ನೀಲ್ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕಾರಣ, ಸೌಥ್ ಇಂಡಿಯನ್ ಸ್ಟಾರ್ ಪ್ರಭಾಸ ಮುಂದಿನ ಚಿತ್ರಕ್ಕೆ ಪ್ರಶಾಂತ ನೀಲ್ ಆ್ಯಕ್ಷನ್ ಹೇಳ್ತಿರುವುದು. ಡಿಸೆಂಬರ್ 3ರಂದು ಸಲಾರ್ ಅನ್ನೋ ಟೈಟಲ್ ಹೊಂದಿರುವ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ, ಕನ್ನಡದಿಂದ ಹೆಸರು ಮಾಡಿ ಇದೀಗ ಪರಭಾಷೆ ಕಡೆ ಹೋಗಿರುವುದಕ್ಕೆ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ತೆಲುಗು, ತಮಿಳಿನ ಸೂಪರ್ ಸ್ಟಾರ್ ನಿರ್ದೇಶಕರು ಕನ್ನಡದಲ್ಲಿ ಬಂದು, ಕನ್ನಡದ ನಟರನ್ನ ಹಾಕಿಕೊಂಡು ಸಿನಿಮಾ ಮಾಡುವುದಿಲ್ಲ. ನೀವು ನೋಡಿದ್ರೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಅಂದುಕೊಂಡು ಹೋಗಿದ್ರಲ್ಲ ಎಂದು ಬೈಯುತ್ತಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ನಿರ್ದೇಶಕ ಪ್ರಶಾಂತ ನೀಲ್, ಸಲಾರ್ ಅನ್ನೋದು ಪರ್ಷಿಯನ್ ಪದ. ಸಲಾರ್ ಅಂದ್ರೆ ಸೇನಾಧಿಪತಿ, ಕಮಾಂಡರ್ ಇನ್ ಚೀಫ್ ಅನ್ನೋ ಅರ್ಥವಿದೆ. ಒಂದೇ ಪೋಸ್ಟರ್ ನಲ್ಲಿ ಎಲ್ಲವೂ ಹೇಳಲು ಆಗುವುದಿಲ್ಲ. ಹೀಗಾಗಿ ಟ್ಯಾಗ್ ಲೈನಲ್ಲಿ ಒಂದಿಷ್ಟು ಹೇಳುವ ಪ್ರಯತ್ನ ಮಾಡಿದೀವಿ ಎಂದು ಹೇಳಿದ್ದಾರೆ. ಹೀಗೆ ಟೈಟಲ್ ಬಗ್ಗೆ ಹೇಳಿರುವುದು ಬಿಟ್ರೆ ಪರಭಾಷೆ ಚಿತ್ರ ನಿರ್ದೇಶನದ ಬಗ್ಗೆ ಎಲ್ಲಿಯೂ ಮಾತ್ನಾಡಿಲ್ಲ.




Leave a Reply

Your email address will not be published. Required fields are marked *

error: Content is protected !!