ಬಂದ್ ವಿಫಲಕ್ಕೆ ಕಾರಣಗಳು ಇಲ್ಲಿವೆ…

274

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ನೀಡಿತ್ತು. ಅದಕ್ಕೂ ಪೂರ್ವದಲ್ಲಿ ಹಲವು ಜಿಲ್ಲೆಗಳಲ್ಲಿ ಹೋರಾಟ ಮಾಡಿಕೊಂಡು ಬಂದಿತ್ತು. ಆದ್ರೆ, ಈ ಬಾರಿಯ ಬಂದ್ ನ್ನ ಸಂಪೂರ್ಣವಾಗಿ ವಿಫಲ ಮಾಡಲಾಗಿದೆ.

ವಾಟಾಳ್ ನಾಗರಾಜ, ಸಾ.ರಾ ಗೋವಿಂದ ಸೇರಿದಂತೆ ಇತರೆ ನಾಯಕರು ಪ್ರತಿಕಾಗೋಷ್ಠಿ ನಡೆಸಿ ಬಂದ್ ಗೆ ಕರೆ ನೀಡಲಾಗಿತ್ತು. ರಾಜ್ಯ ಸರ್ಕಾರ ಇದನ್ನ ವಿಫಲ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಯಶಸ್ವಿ ಆಗದ ಬಂದ್ ಗೆ ಕಾರಣವೇನು ಅನ್ನೋದು ಇಲ್ಲಿದೆ..

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರುದ್ಧದ ಹೋರಾಟವನ್ನ ಜಾತಿ ವಿರೋಧಿ ಹೋರಾಟ ಎಂದು ಅಪಪ್ರಚಾರ ಮಾಡಿದ್ದು

ಮರಾಠ ಸಮುದಾಯ ಹಾಗೂ ಕನ್ನಡ ಪರ ಹೋರಾಟಗಾರರ ನಡುವೆ ವೈಮನಸ್ಸು ಮೂಡಿಸಿದ್ದು

ಬಂದ್ ವಿಫಲಗೊಳಿಸಲು ರಾಜ್ಯ ಸರ್ಕಾರ ಹಿಂದೂಪರ ಸಂಘಟನೆಗಳನ್ನ ಬಳಸಿಕೊಂಡಿದ್ದು

ಸೋಷಿಯಲ್ ಮೀಡಿಯಾದಲ್ಲಿ ಬಂದ್ ಕುರಿತು ವ್ಯಾಪಕವಾದ ಅಪಪ್ರಚಾರ ಮಾಡಿದ್ದು

ಕರವೇ ವಿರುದ್ಧ ಶಾಸಕ ಯತ್ನಾಳ ಬಾಯಿಗೆ ಬಂದಂತೆ ಮಾತ್ನಾಡಿದ್ರೂ ರಾಜ್ಯಾಧ್ಯಕ್ಷ ನಾರಾಯಣಗೌಡರು ಎಲ್ಲಿಯೂ ಕಾಣಿಸಿಕೊಳ್ಳದೆ ಇರೋದು

ಕರವೇ ಪ್ರವೀಣ ಶೆಟ್ಟಿ ಬಣದ ವತಿಯಿಂದಲೂ ವಾಟಾಳ್, ಸಾರಾ ತಂಡಕ್ಕೆ ಸಿಗದ ಬೆಂಬಲ

ಕನ್ನಡ ಪರ ಸಂಘಟನೆಗಳಲ್ಲಿ ಹುದ್ದೆ ಹೊಂದಿರುವ ಕೆಲವರು ಬಿಜೆಪಿಯಲ್ಲಿಯೂ ಸ್ಥಾನಮಾನ ಹೊಂದಿದ್ದು ಹೋರಾಟಕ್ಕೆ ಇಳಿಯದಂತೆ ಮಾಡಿತು

ಮರಾಠ ಸಮುದಾಯವನ್ನ ವಿರೋಧ ಮಾಡಿಕೊಂಡಂತೆ ಅನ್ನುವ ದೃಷ್ಟಿಯಿಂದ ಹೋರಾಟದಿಂದ ದೂರ ಉಳಿದ ಕಾಂಗ್ರೆಸ್ ಹಾಗೂ ಜೆಡಿಎಸ್

ವೋಟ್ ಬ್ಯಾಂಕ್ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಗಟ್ಟಿಯಾಗಿ ಕಾಂಗ್ರೆಸ್, ಜೆಡಿಎಸ್ ನಾಯಕರು ಧ್ವನಿ ಎತ್ತದೆ ಹೋದದ್ದು

ಕನ್ನಡ ಪರ ಸಂಘಟನೆಗಳ ಬಹುತೇಕ ಹೋರಾಟಗಳಲ್ಲಿ ಭಾಗವಹಿಸುವ ಮಠಾಧೀಶರು ಮೌನಕ್ಕೆ ಜಾರಿದ್ದು

ಹೀಗೆ ಹತ್ತು ಹಲವು ಕಾರಣಗಳಿಂದ ಶನಿವಾರದ ಬಂದ್ ಸಂಪೂರ್ಣವಾಗಿ ವಿಫಲವಾಯ್ತು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋದು ನಿಧಾನವಾಗಿ ಕರಗಿ ಹೋಗ್ತಿರುವ ಮುನ್ಸೂಚನೆಯಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನ ರಾಜ್ಯ ಸರ್ಕಾರ ಯಾಕೆ ಮಾಡಿತು ಅನ್ನೋದು ಗೊತ್ತಿದ್ದು ವಿಪಕ್ಷಗಳು ಜಾಣಮೌನ ವಹಿಸಿರುವುದು ಬಂದ್ ವಿಫಲಕ್ಕೆ ಕಾರಣವಾಯ್ತು.




Leave a Reply

Your email address will not be published. Required fields are marked *

error: Content is protected !!