ಕೆಜಿಎಫ್-3 ಸುಳಿವು ನೀಡಿದ ನಿರ್ದೇಶಕ!

372

ಕೆಜಿಎಫ್ ಸಿನ್ಮಾ ಬರೀ ಕನ್ನಡದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ಹೊಸ ದಾಖಲೆ ಬರೆದ ಚಿತ್ರ. ರಾಕಿಂಗ್ ಸ್ಟಾರ್ ಯಶಗೆ ಕೆಜಿಎಫ್ ಮೂವಿ ಪ್ಯಾನ್ ಇಂಡಿಯಾ ಮಾಡಿತು. ಇದೀಗ ಅದರ ಪಾರ್ಟ್ 2 ಬರ್ತಿದೆ. ಇದರ ನಡುವೆ ಪಾರ್ಟ್ 3 ಬಗ್ಗೆ ನಿರ್ದೇಶಕ ಪ್ರಶಾಂತ ನೀಲ್ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.

ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಗನ ಚಿತ್ರವೊಂದು ಪೋಸ್ಟ್ ಮಾಡಿದ್ದಾರೆ. ಅಲ್ಲೇನು ವಿಷೇಶವಿದೆ ಅಂದ್ರೆ, ಅವರ ಮಗನ ಹೇರ್ ಸ್ಟೈಲ್ ನಲ್ಲಿ 3 ಅಂತಾ ಬರೆಯಲಾಗಿದೆ. ಹೀಗಾಗಿ ಇದನ್ನ ಕೆಜಿಎಫ್-3 ಸುಳಿವು ಇರಬೇಕೆಂದು ಅಭಿಮಾನಿಗಳು ಕಾಮೆಂಟ್ಸ್ ಮಾಡ್ತಿದ್ದಾರೆ.

ಇನ್ನು ತೆಲುಗು ನಟ ವಿಜಯ ದೇವರಕೊಂಡಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಶ ಅವರಿಂದ ಏನನ್ನ ಕದಿಯುತ್ತೀರಿ ಅಂತಾ ಕೇಳಿದ್ದಕ್ಕೆ ನಿರ್ದೇಶಕ ಪ್ರಶಾಂತ ನೀಲ್ ಅವರನ್ನ ಕದ್ದು ಕೆಜಿಎಫ್-3 ಸಿನ್ಮಾ ಮಾಡ್ತೀವಿ ಅಂತಾ ಹೇಳಿದ್ರು. ಇದೆಲ್ಲವು ಎಲ್ಲೋ ಕೆಜಿಎಫ್-3 ಚಿತ್ರದ ಹಿಂಟ್ಸ್ ಇರಬೇಕು ಎನ್ನಲಾಗ್ತಿದೆ. ಇದಕ್ಕೆಲ್ಲ ನಿರ್ದೇಶಕರಾದ ಪ್ರಶಾಂತ ನೀಲ ಉತ್ತರ ನೀಡಬೇಕು. ಆದ್ರೆ, ಮೊದಲು ಕೆಜಿಎಫ್-2 ಚಿತ್ರ ರಿಲೀಸ್ ಆಗಲಿ. ಆಮೇಲೆ ಪಾರ್ಟ್ 3 ಬಗ್ಗೆ ಪ್ಲಾನ್ ಮಾಡಿ ಅಂತಿದ್ದಾರೆ ಫ್ಯಾನ್ಸ್.




Leave a Reply

Your email address will not be published. Required fields are marked *

error: Content is protected !!