ಚಂದನವನದಲ್ಲಿ ಸ್ಟಾರ್ಸ್ ‘ಚುಂಬನ’ ಮ್ಯಾಜಿಕ್

367

ಪ್ರೇಮಿಗಳ ದಿನವಾದ ಶುಕ್ರವಾರ ಸ್ಯಾಂಡಲ್ ವುಡ್ ನಲ್ಲಿ ಚುಂಬನದ ಪೋಸ್ಟರ್ ಗಳು ಮ್ಯಾಜಿಕ್ ಮಾಡಿವೆ. ಸ್ಟಾರ್ ನಟ, ನಟಿಯರ ಮುತ್ತಿನ ಪೋಸ್ಟರ್, ಟೀಸರ್ ಪ್ರೇಕ್ಷರನ್ನ ರಂಜಿಸಿವೆ. ಏಕ್ ಲವ್ ಯಾ, ಮೇಲೊಬ್ಬ ಮಾಯಾವಿ, ಶಿವ 143, ಮಿಗಿಲ್ ಪೇಟೆ ಸೇರಿ ಅನೇಕ ಚಿತ್ರಗಳ ಪೋಸ್ಟರ್ ಶುಕ್ರವಾರ ರಿಲೀಸ್ ಆಗಿವೆ.

ಪ್ರೇಮಿಗಳ ದಿನದಂದ ರಿಲೀಸ್ ಆದ ಪೋಸ್ಟರ್ ಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಲಿಪ್ ಲಾಕ್ ದೃಶ್ಯಗಳು. ಏಕ್ ಲವ್ ಯಾ ಚಿತ್ರದಲ್ಲಿ ನಟ ರಾಣಾ ಹಾಗೂ ನಟಿ ರಚಿತಾ ರಾಮ ಕಿಸ್ ಸೀನ್, ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ನಟ ಸಂಚಾರಿ ವಿಜಯ ಮತ್ತು ನಟಿ ಅನನ್ಯ ಶೆಟ್ಟಿ, ಶಿವ 143 ಚಿತ್ರದಲ್ಲಿ ನಟ ಧೀರೇನ್ ಹಾಗೂ ನಟಿ ಮಾನ್ವಿತಾ ಕಾಮತ್ ಅವರ ಕಿಸ್ಸಿಂಗ್ ಸೀನ್ ಗಳು ಸದ್ದು ಮಾಡ್ತಿವೆ.

ಶುಕ್ರವಾರ ಚಂದನವನದಲ್ಲಿಯೇ ಲವರ್ಸ್ ಡೇ ಸಲುವಾಗಿಯೇ ಒಂದಿಷ್ಟು ಚಿತ್ರಗಳ ಪೋಸ್ಟರ್, ಟೀಸರ್ ರಿಲೀಸ್ ಆಗಿವೆ. ಹೀಗೆ ಬಿಡುಗಡೆಯಾದ ಬಹುತೇಕ ಫೋಟೋ, ವಿಡಿಯೋದಲ್ಲಿ ಮುತ್ತಿನ ಸುರಿಮಳೆ ಸುರಿಸಲಾಗಿದೆ. ಇದ್ರಿಂದಾಗಿ ಸಿನಿ ಪ್ರೇಕ್ಷರಿಗೆ ಒಂದಿಷ್ಟು ಖುಷಿ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!