ಸಂಜು ಬಾಬಾ ಬರ್ಥ್ ಡೇಗೆ ಕೆಜಿಎಫ್ ಗಿಫ್ಟ್.. ‘ಅಧೀರ’ನ ಲುಕ್ ಗೆ ಆ ಚಿತ್ರ ಸ್ಪೂರ್ತಿ

313

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇಂದು ಬಾಲಿವುಡ್ ಸ್ಟಾರ್ ನಟ ಸಂಜಯ ದತ್ತ ಅವರ ಹುಟ್ಟು ಹಬ್ಬ. ಈ ನಟ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಜು ಬಾಬಾ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮೊದಲ ಅನೌನ್ಸ್ ಮಾಡಿದ್ದ ನಿರ್ದೇಶಕ, ಕ್ರೂರತೆಯ ಅವತಾರ ಅನಾವರಣ ಮಾಡಿದ್ದಾರೆ.

ಈ ಮೊದ್ಲು ಎಂದೂ ನೋಡಿರದ ಗೆಟಪ್ ನಲ್ಲಿ ನಟ ಸಂಜಯ ದತ್ ಕಾಣಿಸಿಕೊಂಡಿದ್ದಾರೆ. ಅವರ ಈ ಪೋಸ್ಟರ್ ಖಳನಟನ ಕೌರ್ಯ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಅಂದ್ಹಾಗೆ ಈ ಗೆಟಪ್ ಗೆ ಸ್ಪೂರ್ತಿಯಾಗಿದ್ದ 2013ರಲ್ಲಿ ತೆರೆಗೆ ಬಂದ ವಿಕಿಂಗ್ಸ್ ಸರಣಿಯ ಚಿತ್ರ. ಪಕ್ಕಾ ಆ್ಯಕ್ಷನ್ ಚಿತ್ರವಾಗಿದ್ದ ವಿಕಿಂಗ್ಸ್ 6 ಸೀರಿಸ್ ನಲ್ಲಿ ರಿಲೀಸ್ ಆಗಿದೆ.

ಪ್ರಶಾಂತ ನೀಲ್ ನಿರ್ದೇಶನದ ಚಿತ್ರವನ್ನ ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯಕುಮಾರ ಕಿರಗಂದೂರು ನಿರ್ಮಾಣ ಮಾಡ್ತಿದ್ದಾರೆ. ಇನ್ನು ನಟಿ ರವಿನಾ ಟಂಡನ್ ಅವರ ಪಾತ್ರದ ಲುಕ್ ಬಿಡುಗಡೆಯಾಗಬೇಕಿದೆ.




Leave a Reply

Your email address will not be published. Required fields are marked *

error: Content is protected !!