ಶಾಲೆ ಪ್ರಾರಂಭ ಸಂಬಂಧ ಸಂಜೆ ಮಾರ್ಗಸೂಚಿ ಪ್ರಕಟ

232

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 9ರಿಂದ ದ್ವಿತೀಯ ಪಿಯುಸಿ ವರೆಗೆ ಶಾಲೆ, ಕಾಲೇಜು ಪ್ರಾರಂಭಿಸುವ ಸಂಬಂಧ ಈಗಾಗ್ಲೇ ದಿನಾಂಕ ನಿಗದಿ ಮಾಡಲಾಗಿದೆ. ಈ ಸಂಬಂಧ ಮಾರ್ಗಸೂಚಿಗಳನ್ನ ಇಂದು ಸಂಜೆ ಪ್ರಕಟ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ ಹೇಳಿದ್ದಾರೆ.

ಆಗಸ್ಟ್ 23ರಿಂದ 9ರಿಂದ 12ನೇ ತರಗತಿವರೆಗೂ ಶಾಲೆಗಳು ಪ್ರಾರಂಭವಾಗಲಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನ ಮಾಡಿಕೊಳ್ಳಲಾಗ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತ್ನಾಡಲಾಗ್ತಿದೆ. ಕೋವಿಡ್ ಮಾರ್ಗಸೂಚಿ ಬಗ್ಗೆ ಸಂಜೆ ತಿಳಿಸಲಾಗುವುದು. ಇನ್ನು ಶುಲ್ಕದ ಬಗ್ಗೆಯೂ ಬಲವಂತವಿಲ್ಲ. ರೂಪ್ಸಾ ಜೊತೆ ಮಾತ್ನಾಡಿದ್ದು, ನಮ್ಮ ಮನವಿಗೆ ಖಾಸಗಿ ಶಾಲೆಗಳ ಸಂಘಟನೆ ಒಪ್ಪಿದೆ ಎಂದರು.

ಇನ್ನು ಆಗಸ್ಟ್ 30ರಂದು ತಜ್ಞರ ಜೊತೆ ಸಭೆ ನಡೆಯಲಿದೆ. ಇದಾದ ಬಳಿಕ 1-8ನೇ ತರಗತಿ ಪ್ರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!