ಜಮೀನಿನಲ್ಲಿ ಕನಿಷ್ಟ 20 ಮರ ನೆಡಬೇಕು: ಅಶೋಕ ಅಲ್ಲಾಪೂರ

257

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಅವರು ಮಾತ್ನಾಡಿ, ಎರಡು ದಿನದಲ್ಲಿ ರಾಜ್ಯಾದ್ಯಂತ ಅಂದಾಜು 90 ಮಿಲಿ ಮೀಟರ್ ಮಳೆಯಾಗಿದ್ದು, ಕೃಷಿ ಇಲಾಖೆಯಿಂದ ಸಜ್ಜೆ, ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜಗಳನ್ನು ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡಲಾಗ್ತಿದೆ ಎಂದರು.

ಪ್ರಕೃತಿ ಮತ್ತು ರೈತನ ಆರೋಗ್ಯ ಚೆನ್ನಾಗಿದ್ದರೆ ವಿಶ್ವದ ಜನತೆಯ ಆರೋಗ್ಯ ಚೆನ್ನಾಗಿರುತ್ತದೆ. ಈಗ ಆಮ್ಲಜನಕದ ಅವಶ್ಯಕತೆಯ ಬಗ್ಗೆ ಜನರಿಗೆ ತಿಳಿದಿದೆ. ಎಲ್ಲರೂ ತಮ್ಮ ಜಮೀನಿನಲ್ಲಿ ಕನಿಷ್ಠ ಇಪ್ಪತ್ತು ಮರಗಳನ್ನು ನೆಡಬೇಕೆಂದು ತಿಳಿಸಿದರು. ಕೇಂದ್ರ ಸರ್ಕಾರ ಡಿಎಪಿ ಗೊಬ್ಬರ ನಿಗದಿಪಡಿಸಿದ 1,200 ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ  ಕೃಷಿ ಅಧಿಕಾರಿಗಳ ಗಮನಕ್ಕೆ ತರಲು ವಿನಂತಿಸಿದರು.

ಈ ವೇಳೆ ಅಧ್ಯಕ್ಷತೆಯನ್ನ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ವಹಿಸಿದ್ದರು. ಪ್ರಾಸ್ತಾವಿಕವಾಗಿ ಕೃಷಿ ಅಧಿಕಾರಿ ಶಿವಾನಂದ ಹೂವಿನಳ್ಳಿ ಮಾತ್ನಾಡಿದ್ರು. ಶ್ರೀಶೈಲ ಯಳಮೇಲಿ, ಶಿವನಂತ ತಾವರಕೇಡ, ಶಾಂತು ರಾಣಾಗೋಳ ಉಪಸ್ಥಿತರಿದ್ರು. ಸಹಾಯಕ ಕೃಷಿ ಅಧಿಕಾರಿ ಸೀತಿಮನಿ ವಂದನಾರ್ಪಣೆ ಮಾಡಿದರು.

ಯಂಕಂಚಿಯಲ್ಲಿ ಬೀಜ ವಿತರಣೆ

ಇನ್ನು ಯಂಕಂಚಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿಯೂ ಬೀಜ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಪಿಕೆಪಿಎಸ್ ಅಧ್ಯಕ್ಷರಾದ ಪೋಲಿಸ ಪಾಟೀಲ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಜಿ ಆರ್ ಪಾಟೀಲ, ಬಸವರಾಜ ನಾಯ್ಕೋಡಿ, ಜಿಎಸ್ ಮುರುಡಿ, ಜಗದೀಶ ಹೂನಳ್ಳಿ, ಮಾದೇವಪ್ಪ ಅಳ್ಳಗಿ  ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!