1 ತಿಂಗಳ ಮಗು ಮಾರಾಟ: 6 ಜನರ ಬಂಧನ

242

ಪ್ರಜಾಸ್ತ್ರ ಸುದ್ದಿ

ಧಾರವಾಡ: ಒಂದು ತಿಂಗಳ ಗಂಡು ಮಗುವನ್ನ 2.50 ಲಕ್ಷ ರೂಪಾಯಿ ಮಾರಾಟ ಮಾಡಿದ ಪ್ರಕರಣ ಸಂಬಂಧ 6 ಜನರನ್ನ ಬಂಧಿಸಲಾಗಿದೆ.ಭಾರತಿ ಮಂಜುನಾಥ ವಾಲ್ಮೀಕಿ, ರಮೇಶ ಮಂಜುನಾಥ ವಾಲ್ಮೀಕಿ, ವಿನಾಯಕ ಮಾದರ, ಭೀಮಸೇನ ಹೆಗಡೆ ಹಾಗೂ ಮಗು ಖರೀದಿ ಮಾಡಿದ ದಂಪತಿ ವಿಜಯ ನೆಗಳೂರು, ಚೈತ್ರಾ ಎಂಬುವರನ್ನ ಬಂಧಿಸಲಾಗಿದೆ.

ಮೀಟರ್ ಬಡ್ಡಿ ದಂಧೆ ಮಾಡುವ ನಾಲ್ವರು ದಂಪತಿಗೆ ಸಾಲ ನೀಡಿದ್ದರು. ಸಾಲ ತೀರಿಸಲು ಆಗದ ಕಾರಣ, ಅವರಿಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಅಕ್ರಮ ಬಂಧನದಲ್ಲಿಟ್ಟು ಮಗು ಮಾರಾಟ ಮಾಡಿದ್ದರು. ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿಸಿದ್ದು, ಮಗುವನ್ನ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!