ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾತ್ರಿ ವೇಳೆ ಬೈಕ್ ನಲ್ಲಿ ಓಡಾಡುತ್ತಾ ಅಪರಿಚಿತ ಮಹಿಳೆಯರ ದೇಹ ಸ್ಪರ್ಶಿಸಿ ಲೈಂಗಿಕ ಕಿರುಕುಳ ಕೊಡ್ತಿದ್ದ ಸೈಕೋ ಅರುಣಕುಮಾರನನ್ನ ಬಂಧಿಸಲಾಗಿದೆ. 40ಕ್ಕೂ ಹೆಚ್ಚು ಸಿಸಿಟಿವಿ ಹಾಗೂ 80 ಬೈಕ್ ಗಳ ಪರಿಶೀಲನೆ ನಡೆಸಿ ಅರೆಸ್ಟ್ ಮಾಡಲಾಗಿದೆ.
ಮೇ 31ರ ರಾತ್ರಿ ಕೋರಮಂಗಲದಲ್ಲಿ ಉತ್ತರ ಭಾರತ ಮೂಲದ ಯುವತಿ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಯುವತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಳು. ಈ ಕುರಿತು ತನಿಖೆ ನಡೆಸಿ ಕೆಜಿಎಪ್ ನ ರಾರ್ಬಟ್ ಸನ್ ಪೇಟೆಯ ನಿವಾಸಿ ಸೈಕೋ ಅರುಣಕುಮಾರನನ್ನ ಬಂಧಿಸಲಾಗಿದೆ.