‘ಶಕೀಲಾ’ ಬರುವುದಕ್ಕೆ ದಿನಾಂಕ ಫಿಕ್ಸ್

270

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ಇಂದ್ರಜಿತ ಲಂಕೇಶ ಆ್ಯಕ್ಷನ್ ಕಟ್ ಹೇಳಿರುವ ಶಕೀಲಾ ಮೂವಿ ಥಿಯೇಟರ್ ಗೆ ಲಗ್ಗೆ ಇಡಲು ದಿನಾಂಕ ಫಿಕ್ಸ್ ಆಗಿದೆ. ರಿಚಾ ಚಡ್ಡಾ ನಟನೆಯ ಶಕೀಲಾ ಮೂವಿ ಇದೆ ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ ಬರ್ತಿದೆ. ಈಗಾಗ್ಲೇ ಪೋಸ್ಟರ್ ಮೂಲಕ ಸಾಕಷ್ಟು ಕ್ರೇಜ್ ಹುಟ್ಟು ಹಾಕಿರುವ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಶಕೀಲಾ ಮೂವಿ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಹ ರಿಲೀಸ್ ಆಗ್ತಿದೆ. ನಟಿ ರಿಚಾ ಚಡ್ಡಾ ಜೊತೆ ಪಂಕಜ ತ್ರಿಪಾಠಿ, ಮಲಯಾಳಂ ನಟ ರಾಜೀವ ಪಿಳ್ಲೈ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೇರಳ ಮೂಲದ ನಟಿ ಶಕೀಲಾ, 90ರ ದಶಕದಲ್ಲಿ ಹಾಟ್ ನಟಿ.

ನಟಿ ಶಕೀಲಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ವಯಸ್ಕರ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದವರು. ಇದೀಗ ಅವರ ಜೀವನಾಧರಿತ ಚಿತ್ರ ತೆರೆಗೆ ಬರ್ತಿದೆ.




Leave a Reply

Your email address will not be published. Required fields are marked *

error: Content is protected !!