‘ರನ್ ಮಷಿನ್’ನಿಂದ ಲಿಟಲ್ ಮಾಸ್ಟರ್ ರೆಕಾರ್ಡ್ ಬ್ರೇಕ್!

291

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗ್ಲೇ ಏಕದಿನ ಸರಣಿಯನ್ನ ಸೋತಿದೆ. ಡಿಸೆಂಬರ್ 3ರಂದು ನಡೆಯುವ ಕೊನೆಯ ಪಂದ್ಯ ಆಟಕ್ಕೂಂಟು ಲೆಕ್ಕಕ್ಕಿಲ್ಲ. ಆದ್ರೆ, ಅದನ್ನ ಸೋತು ಕ್ಲೀನ್ ಸ್ವಿಪ್ ಆಗುವ ಬದಲು ಗೆದ್ದು ಒಂದಿಷ್ಟು ಗೌರವ ಉಳಿಸಿಕೊಳ್ಳಬೇಕಿದೆ.

ಈ 3ನೇ ಏಕದಿನ ಪಂದ್ಯ ಕ್ಯಾಪ್ಟನ್ ವಿರಾಟ ಕೊಹ್ಲಿ ಹೊಸ ದಾಖಲೆ ಬರೆಯಲು ಸಾಕ್ಷಿಯಾಗಲಿದೆ. ಅದು ಕ್ರಿಕೆಟ್ ಜಗತ್ತಿನ ದೇವರು, ಲಿಟಲ್ ಮಾಸ್ಟರ್ ಸಚಿನ ತಂಡೂಲ್ಕರ್ ಅವರ ದಾಖಲೆಯನ್ನ ಸರಿಗಟ್ಟುವುದು. ಹೌದು, ಕೊಹ್ಲಿ ಇನ್ನು 23 ರನ್ ಬಾರಿಸಿದ್ರೆ 12 ಸಾವಿರ ರನ್ ಕಂಪ್ಲೀಟ್ ಆಗಲಿದೆ. 12 ಸಾವಿರ ರನ್ ಬಾರಿಸಲು ಸಚಿನ 300 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದನ್ನ ಕೊಹ್ಲಿ 251ನೇ ಪಂದ್ಯದಲ್ಲಿಯೇ ಮುಟ್ಟುತ್ತಾರಾ ಅನ್ನೋ ಪ್ರಶ್ನೆ ಇದೆ.

ರನ್ ಮಿಷನ್ ಎನಿಸಿಕೊಂಡಿರುವ ಕೊಹ್ಲಿಗೆ ಇದು ಖಂಡಿತ ಸಾಧ್ಯವಿದೆ. ಇನ್ನು 23 ರನ್ ಬಾರಿಸಿದ್ರೆ ಅತಿ ವೇಗವಾಗಿ 12 ಸಾವಿರ ರನ್ ಮುಟ್ಟಲಿದ್ದಾರೆ. ಇಷ್ಟು ರನ್ ಗಳಿಸಿದ ವಿಶ್ವದ 6ನೇ ಬ್ಯಾಟ್ಸ್ ಮನ್ ಆಗಲಿದ್ದಾರೆ. ತಂಡೂಲ್ಕರ್ ಬಳಿಕ ರಿಕಿ ಪಾಂಟಿಂಗ್, ಸನತ್ ಜಯಸೂರ್ಯ, ಕುಮಾರ ಸಂಗಾಕರ್, ಮಹೇಲ ಜಯವರ್ಧನ ಈ ಸಾಧನೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!