ಸೌಥ್ ಬ್ಯೂಟಿ ಶಾಮ್ನಾಗೆ ಮದುವೆ ಹೆಸರಲ್ಲಿ ವಂಚನೆ

307

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದಕ್ಷಿಣ ಭಾರತದ ನಟಿ ಶಾಮ್ನಾ ಕಾಸೀಂಗೆ ಮದುವೆ ಹೆಸರಿನಲ್ಲಿ ವಂಚನೆ ಮಾಡಿದ ನಾಲ್ವರನ್ನ ಅರೆಸ್ಟ್ ಮಾಡಲಾಗಿದೆ. ನಟಿ ಶಾಮ್ನಾ ಮನೆಯಲ್ಲಿ ವರ ಹುಡುಕುತ್ತಿದ್ದರು. ಇತ್ತ ನಟಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ಳು. ಹೀಗಿರುವಾಗ, ವರನ ಕುಟುಂಬವೆಂದು ಹೇಳಿಕೊಂಡು ಕೆಲವರು ನಟಿ ಕುಟುಂಬಸ್ಥರನ್ನ ಭೇಟಿಯಾಗಿದ್ದಾರೆ.

ಶುರುವಿನಲ್ಲಿ ಚೆನ್ನಾಗಿದೆ ಎನ್ನುವ ಟೈಂನಲ್ಲಿ ನೀಡಿರುವ ಫೋಟೋ, ಹೆಸರು, ವಿಳಾಸ ಎಲ್ಲವೂ ಫೇಕ್ ಅನ್ನೋದು ಗೊತ್ತಾಗಿದೆ. ಇದರಲ್ಲಿದ್ದ ಎಲ್ಲರನ್ನ ಬಂಧಿಸಲಾಗಿದೆ. ಇವರಿಗೆ ಈಗಾಗ್ಲೇ ಮದುವೆಯಾಗಿ ಮಕ್ಕಳಿವೆ ಎಂದು ನಟಿ ಶಾಮ್ನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮಲಯಾಳಂ ಮೂಲದ ನಟಿ ಕನ್ನಡದಲ್ಲಿ ಜೋಶ್ ಹಾಗೂ 100 ಮೂವಿ ಅನ್ನೋ ಚಿತ್ರದಲ್ಲಿಯೂ ನಟಿಸಿದ್ದು, ತಮಿಳು, ತೆಲುಗು ಸಿನಿ ದುನಿಯಾದಲ್ಲಿಯೂ ಮಿಂಚಿದ್ದಾಳೆ. ಸಧ್ಯ ರಿಯಾಲಿಟಿ ಶೋ ಹಾಗೂ ತಲೈವಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದು, ಇಂತವರಿಂದ ಅದೆಷ್ಟು ಹೆಣ್ಮಕ್ಕಳು ಮಾನಸಿಕ ಹಿಂಸೆ ಅನುಭವಿಸಿರಬಹುದು. ವಂಚಕರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದಿದ್ದಾಳೆ.




Leave a Reply

Your email address will not be published. Required fields are marked *

error: Content is protected !!