ಒಂದೇ ದಿನದಲ್ಲಿ 3 ಸಾವಿರಕ್ಕೂ ಅಧಿಕ ಸೋಂಕು.. 50 ಸಾವಿರದತ್ತ ಕರ್ನಾಟಕ

328

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು ಮೊದಲ ಬಾರಿಗೆ 3 ಸಾವಿರಕ್ಕೂ ಅಧಿಕ ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 3,176 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ 47,253 ಮಂದಿಗೆ ಇದುವರೆಗೂ ಕೋವಿಡ್ 19 ಪಟ್ಟಿದ್ದು, 50 ಸಾವಿರ ಸಮೀಪ ಬಂದಿದೆ.

ಇನ್ನು 87 ಜನ ಸಾಯುವ ಮೂಲಕ 928ಕ್ಕೆ ಏರಿಕೆಯಾಗಿದ್ದು, ಸಾವಿರ ಹತ್ತಿರಕ್ಕೆ ಬಂದಿದೆ. 1076 ಜನ ಇಂದು ಡಿಸ್ಚಾರ್ಜ್ ಆಗುವ ಮೂಲಕ 18,466 ಜನ ಇದುವರೆಗೂ ಗುಣಮುಖರಾಗಿದ್ದು, 27,853 ಪ್ರಕರಣಗಳು ಚಾಲ್ತಿಯಲ್ಲಿವೆ. ಇನ್ನು ಜಿಲ್ಲಾವಾರು ಸೋಂಕಿತರ ಲಿಸ್ಟ್ ಹೀಗಿದೆ..

ಬೆಂಗಳೂರು ನಗರ 1975, ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಿ 49, ಉತ್ತರ ಕನ್ನಡ 48, ಬೆಳಗಾವಿ 41, ಗದಗ 39, ಬೀದರ 35, ದಾವಣಗೆರೆ 35, ಬಾಗಲಕೋಟೆ 34, ಚಿಕ್ಕಬಳ್ಳಾಪುರ 32, ಮಂಡ್ಯ 31, ಶಿವಮೊಗ್ಗ 29, ರಾಯಚೂರು 26, ಹಾಸನ 25, ತುಮಕೂರು 24, ಕೊಡಗು 23, ಕೋಲಾರ 15, ಕೊಪ್ಪಳ 14, ಚಿಕ್ಕಮಗಳೂರು 13, ಚಿತ್ರದುರ್ಗ 12, ಬೆಂ.ಗ್ರಾ 10, ಚಾಮರಾಜನಗರ 8, ಹಾವೇರಿ 6, ರಾಮನಗರ 3 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ 3,176 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ.

ಇನ್ನು ಬೆಂಗಳೂರು ನಗರದಲ್ಲಿ 60, ಮೈಸೂರು 6, ಧಾರವಾಡ 5, ಉತ್ತರ ಕನ್ನಡ 3, ಬಾಗಲಕೋಟೆ 3, ಚಿಕ್ಕಬಳ್ಳಾಪುರ 2, ರಾಯಚೂರು 2, ರಾಮನಗರ, ಬೆಂ.ಗ್ರಾ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಸೇರಿದಂತೆ ಮಂಡ್ಯದಲ್ಲಿ ತಲಾ 1 ಸಾವು ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!