ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕಾಳಿ ಹೆಸರಿನ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿರುವ ಲೀನಾ ಮಣಿಮೇಕಲೈ ಬಿಡುಗಡೆ ಮಾಡಿದ ಕಾಳಿ ಫೋಟೋಗೆ ಹಿಂದೂಪರ ಸಂಘಟನೆಗಳಿಂದ, ಇತರರಿಂದ ವಿರೋಧ ವ್ಯಕ್ತವಾಗಿದೆ. ದೂರು ದಾಖಲೆಯಾಗಿವೆ. ಟ್ರಾನ್ಸ್ ಜೆಂಡರ್ ಸಮುದಾಯದ ಬಾವುಟ ಒಂದು ಕೈಯಲ್ಲಿ, ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ ವರೈಲ್ ಆಗಿ ವಿವಾದ ಪಡೆದುಕೊಂಡಿದೆ.
ಲೀನಾ ಪೋಸ್ಟ್ ಮಾಡಿದ್ದ ಫೋಟೋವನ್ನು ಟ್ವೀಟ್ ತೆಗೆದು ಹಾಕಿದೆ. ಇದೀಗ ಶಿವ ಪಾರ್ವತಿಯರ ವೇಷಧಾರಿಗಳು ಬೀಡಿ ಸೇದುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬೇರಡೆ ಅನ್ನೋ ಅರ್ಥ ಬರುವ ಸಾಲು ಬರೆದಿದ್ದಾರೆ. ಇದು ಮತ್ತೊಂದು ಸ್ವರೂಪದ ವಿರೋಧ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ವಾಗ್ದಾಳಿ ನಡೆಸಲಾಗುತ್ತಿದೆ.