ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಮಂಗಳೂರಿನ ಕಾಲೇಜುವೊಂದರ ವಿದ್ಯಾರ್ಥಿಗಳು ಟ್ರು ಅಂಡ್ ಡೇರ್ ಆಟದ ಹೆಸರಿನಲ್ಲಿ ಲಿಪ್ ಕಿಸ್ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ದೂರು ಸಹ ದಾಖಲಾಗಿದೆ. ಇದೀಗ ಶಿವಮೊಗ್ಗದ ಕಾಲೇಜುವೊಂದರ ವಿದ್ಯಾರ್ಥಿಗಳು ಮಾದಕ ಸೇವನೆಯಿಂದ ನಶೆಯಲ್ಲಿ ತೂರಾಟ ನಡೆಸಿದೆ ಘಟನೆ ನಡೆದಿದೆ.
ಕಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಬಿದ್ದು ಒದ್ದಾಡುವುದುನ್ನು ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವರೈಲ್ ಆಗಿದೆ. ಈ ಬಗ್ಗೆ ಅದಾನಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಅದಾನಿ ಬಂದರಲ್ಲಿ 3 ಸಾವಿರ ಟನ್ ಮಾದಕ ವಸ್ತು ಸಿಕ್ಕಿದ್ದರೂ ತನಿಖೆ ನಡೆಸದೆ ಕೈತೊಳೆದುಕೊಂಡಿದ್ದು ಬಿಜೆಪಿ ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿ ಎಂದು ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿದೆ.