ಸಮಾನತೆ ಸಾರಿದ ಶಿವಯೋಗಿ ಸಿದ್ದರಾಮೇಶ್ವರ: ಮುಕ್ತಾಯಕ್ಕ ಕತ್ತಿ

517

ಸಿಂದಗಿ: ಪಟ್ಟಣದ ತಹಶ್ಲೀದಾರ್ ಕಚೇರಿಯಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ 848ನೇ ಜಯಂತಿಯನ್ನ ಆಚರಿಸಲಾಯ್ತು. ಶಾಸಕ ಎಂ.ಸಿ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿದ್ರು. ಬಳಿಕ ಮಾತ್ನಾಡಿದ ಶಾಸಕರು, ಶರಣರು ತಮ್ಮ ಕಾಯಕದಿಂದ, ನಡೆ ನುಡಿಯಿಂದ ದೇವರಾದ್ರು. ನಾವು ಇನ್ನೂ ಮನುಷ್ಯರು ಸಹ ಆಗಿಲ್ಲ. ಹೀಗಾಗಿ ನಾವು ಮೊದಲು ಮಾನವರಾಗಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಹೆಚ್.ಜಿ ಕಾಲೇಜಿನ ಕನ್ನಡ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ, ಗುರು ಚನ್ನಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆದು ಕಾಯಕದೊಂದಿಗೆ ವಚನ ಸಾಹಿತ್ಯದಲ್ಲಿ ಕ್ರಾಂತಿ ಮಾಡಿದ್ರು ಅಂತಾ ಹೇಳಿದ್ರು. ಸಿದ್ದರಾಮೇಶ್ವರರು 68 ಸಾವಿರ ವಚನಗಳು ಬರೆದಿದ್ದಾರೆ ಎನ್ನಲಾಗಿದ್ದು ಅದರಲ್ಲಿ 1,378 ವಚನಗಳು ಮಾತ್ರ ಲಭ್ಯವಾಗಿವೆ. ಸಮಾನತೆ ಸಾರಿದ ಶರಣರು ಅಂತರ್ಜಾತಿ ವಿವಾಹ ಮಾಡುವ ಮೂಲಕ ಜಾತಿ ನಿರ್ಮೂಲನೆಗೆ ಶ್ರಮಿಸಿದ್ರು. ಶರಣರು ಕೆರೆಗಳನ್ನ ನಿರ್ಮಿಸಿ ಜೀವಸಂಕುಲ ಕಾಪಾಡಿದ್ರು. ಅವರ ಜಯಂತಿ ಹೆಸರಿನಲ್ಲಿ ನಾವು ಕಡೆ ಪಕ್ಷ ಕೆಟ್ಟುಹೋದ ಕೊಳವೆಭಾವಿಗಳನ್ನ ಸರಿಪಡಿಸೋಣ ಅಂತಾ ಹೇಳಿದ್ರು.

ಕಾರ್ಯಕ್ರಮದಲ್ಲಿ ಸಿಪಿಐ ಸತೀಶ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಸೈಯದ ಅಹ್ಮದ, ಎಪಿಎಂಸಿ ಅಧ್ಯಕ್ಷ  ಹಳ್ಳೆಪ್ಪಗೌಡ ಚೌಧರಿ, ಸಮಾಜದ ಮುಖಂಡ ನಾಗಪ್ಪ ಪಾತ್ರೋಟಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ರು. ತಹಶೀಲ್ದಾರ್ ಬಿ.ಎಸ್ ಕಡಭಾವಿ ಸ್ವಾಗತಿಸಿದ್ರು. ಕರ್ನಾಟಕ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಮಹಾಂತೇಶ ನೂಲನವರ ಪ್ರಾಸ್ತಾವಿಕ ನುಡಿಗಳನ್ನಾಡಿದ್ರು. ಶಿಕ್ಷಕ ಬಸವರಾಜ ಸೋಪೂರು ನಿರೂಪಿಸಿ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!