ವಾರ್ನರ್, ಪಿಂಚ್ ಶತಕದ ಪಂಚ್ ಗೆ ಕೊಹ್ಲಿ ಟೀಂ ಠುಸ್

594

ಮುಂಬೈ: ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಡೇವಿಡ್ ವಾರ್ನರ್ ಹಾಗೂ ಆರೆನ್ ಪಿಂಚ್ ಶತಕದಾಟದಿಂದ ಆಸೀಸ್ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಶಖರ ಧವನ್ 74 ಹಾಗೂ ಕೆ.ಎಲ್ ರಾಹುಲ 47 ರನ್ ಗಳಿಂದಾಗಿ 255 ರನ್ ಗೆ ಆಲೌಟ್ ಆಗುವ ಮೂಲಕ ಸಾಧರಣ ಟಾರ್ಗೆಟ್ ನೀಡಿತು.

ಈ ಸ್ಕೋರ್ ಬೆನ್ನುಹತ್ತಿದ ಕ್ಯಾಪ್ಟನ್ ಆರೆನ್ ಪಿಂಚ್ ಹಾಗೂ ಡೆವಿಡ್ ವಾರ್ನರ್ ಭಾರತದ ಬೌಲರ್ ಗಳನ್ನ ಹಿಗ್ಗಾಮುಗ್ಗಾ ಬೆಂಡೆತ್ತಿದ್ರು. ಇದರ ಪರಿಣಾಮ ವಾರ್ನರ್ 112 ಬೌಲ್ ಗಳಲ್ಲಿ 128 ರನ್, ಪಿಂಚ್ 114 ಬೌಲ್ ಗಳಲ್ಲಿ 110 ರನ್ ಗಳಿಸಿ 37.4 ಓವರ್ ಗಳಲ್ಲಿ 258 ರನ್ ಬಾರಿಸಿ ಗೆಲುವು ದಾಖಲಿಸಿದ್ರು. ಟೀಂ ಇಂಡಿಯಾ ಬೌಲರ್ ಗಳು ಎಷ್ಟೇ ಬೆವರು ಹರಿಸಿದ್ರೂ ಒಂದೂ ವಿಕೆಟ್ ಪಡೆಯಲಿಲ್ಲ. ಇದ್ರಿಂದಾಗಿ 10 ವಿಕೆಟ್ ಗಳ ಅಂತರದಿಂದ ಆಸ್ಟ್ರೇಲಿಯಾ ವಿನ್ ಆಯ್ತು.

ಆಸ್ಟ್ರೇಲಿಯಾ ಪರ ಮಿಚಲ್ ಸ್ಟ್ರಾಕ್ 3, ಕಮಿನ್ಸ್ ಹಾಗೂ ರಿಚರ್ಡ್ ಸನ್ ತಲಾ 2 ವಿಕೆಟ್ ಪಡೆದ್ರು. ಜಂಪಾ ಹಾಗೂ ಅಗ್ರಾ ತಲಾ 1 ವಿಕೆಟ್ ಪಡೆದ್ರು. ಮೂರು ಪಂದ್ಯಗಳ ಸರಣಿಯಲ್ಲಿ ಆಸೀಸ್ 1-0 ಮುನ್ನಡೆ ಸಾಧಿಸಿತು.




Leave a Reply

Your email address will not be published. Required fields are marked *

error: Content is protected !!