ಮಿಸ್ಟರ್ ಅಮಿತ ಶಾ ಆದೇಶ ಮೇರೆಗೆ ಸಿಬಿಐ ತನಿಖೆ: ಸಿದ್ದರಾಮಯ್ಯ

394

ಹುಬ್ಬಳ್ಳಿ: ಯಡಿಯೂರಪ್ಪನವರು ಸಿದ್ದರಾಮಯ್ಯನವರ ಸಲಹೆ ಮೇರೆಗೆ, ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಂತೆ ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸುಳ್ಳು. ಅವರು ನನ್ನ ಸಂಪರ್ಕ ಮಾಡಿಲ್ಲಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತ್ನಾಡಿದ ಅವರು, ಫೋನ್ ಟ್ಯಾಪಿಂಗ್ ಬಗ್ಗೆ ನಾನು ಸಲಹೆ ಕೊಟ್ಟಿಲ್ಲ. ಯಡಿಯೂರಪ್ಪ ಸುಳ್ಳು ಏಕೆ ಹೇಳಿದ್ರು. ಬಿಜೆಪಿಯವರಿಗೆ ಸಿಬಿಐನವರಿಗೆ ವಾಕರಿಕೆ ಇತ್ತು. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ವ್ಯಾಮೋಹ ಬಂದಿದೆ. ಸಿಬಿಐಯನ್ನ ದುರ್ಬಳಕೆ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

ಆಪರೇಷನ್ ಕಮಲದ ಸಿಬಿಐಗೆ ಕೊಡಲಿ. ಅವರು ಅದನ್ನ ಮಾಡಲ್ಲ. ಆಡಿಯೋ ಪ್ರಕರಣ ಬಂದಾಗ ತನಿಖೆ ಮಾಡಿಸಬೇಕಿತ್ತು. ಆಗ ಕುಮಾರಸ್ವಾಮಿ ಮಾಡಿಸಲಿಲ್ಲ. ಅವರು ಏಕೆ ಬಿಟ್ಟರು ಗೊತ್ತಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಳ್ಳೆಯ ಬಾಂಧವ್ಯ ಈಗ್ಲೂ ಇದೆ ಎಂದ್ರು. ಪ್ರವಾಹ ಬಂದು 15 ಕಳೆದ್ರೂ ಕೇಂದ್ರದಿಂದ ನೈಯಾಪೈಸೆ ಬಂದಿಲ್ಲ. ಮಂತ್ರಿ ಮಂಡಲ ಇಲ್ಲದೇ ಇಷ್ಟು ದಿನ ಸರ್ಕಾರ ಇರುವುದು ಮೊದಲು ಬಾರಿ.

ಯಡಿಯೂರಪ್ಪ ಪಿಎಂ ಭೇಟಿಯಾಗಿ ಬಂದಿದ್ದಾರೆ. ಪಿಎಂ ಹಣ ಕೋಡ್ತಾರೆ ಅಂತಾ ಎಲ್ಲಿ ಆದ್ರೂ ಹೇಳಿದ್ದಾರಾ ಅಂತಾ ಪ್ರಶ್ನಿಸಿದ್ರು. 2009 ರಲ್ಲಿ ಪ್ರವಾಹ ಬಂದಾಗ 1600 ಕೋಟಿಯಷ್ಟು ಹಣವನ್ನ ಆಗಿನ ಪಿಎಂ ಮನಮೋಹನ ಸಿಂಗ್ ಬಿಡುಗಡೆ ಮಾಡಿದ್ದಾರೆ. ಇವರಿಗೆ ಏನೂ ರೋಗ ಹಣ ಕೊಡಲಿಕ್ಕೆ ಅಂತಾ ಕಿಡಿ ಕಾರಿದ್ರು.

ಯಡಿಯೂರಪ್ಪನವರು ನರೇಂದ್ರ ಮೋದಿ ಮತ್ತು ಅಮಿತ ಶಾ ಅವರನ್ನ ನೋಡಿದ್ರೆ ಘಡಘಡ ನಡಗುತ್ತಾರೆ. ಇದಕ್ಕೆ ಜಗದೀಶ ಶೆಟ್ಟರ ಮತ್ತು ಯಡಿಯೂರಪ್ಪ ಉತ್ತರ ಕೊಡಬೇಕು. ನನ್ನ ಮಾಹಿತಿ ಪ್ರಕಾರ 1 ಲಕ್ಷ ಕೋಟಿ ಹಾನಿಯಾಗಿದೆ. 6 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಣ್ಣು ಆಪರೇಷನ್ ಮಾಡಿಕೊಂಡ ಮಾರನೆ ದಿನವೇ ಪ್ರವಾಹ ಬಂದಿತ್ತು, ಹೀಗಾಗಿ ನನಗೆ ಬರಲು ಆಗಲಿಲ್ಲ. ನನ್ನ ಕ್ಷೇತ್ರದಲ್ಲಿ 32 ಹಳ್ಳಿಗಳಲ್ಲಿ ಪ್ರವಾಹ ಬಂದಿದೆ.

ಬಿಜೆಪಿ ಸಚಿವ ಮಂಡಲ ರಚಿಸಲು ಅವರ ಸಮಸ್ಯೆಗಳು ಏನೂ ಇದೆ ಎಂಬುದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅಮಿತ್ ಶಾ ಮರ್ಜಿಯಲ್ಲಿದ್ದಾರೆ. ಅವರು ಒಪ್ಪಿಗೆ ಕೊಟ್ಟ ಮೇಲೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಬಿಜೆಪಿಯವರು ಕೇಂದ್ರ ಸರ್ಕಾರದ ಅಂಗ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಾರೆ. ತನಿಖೆ ರಾಜಕೀಯ ದ್ವೇಷದಿಂದ ಆಗಬಾರದು. ನನ್ನ ಸಲಹೆಯ ಮೇರೆಗೆ ಫೋನ್ ಟ್ಯಾಪಿಂಗ್ ಸಿಬಿಐಗೆ ವಹಿಸಿಲ್ಲ. ಬದಲಿಗೆ ಮಿಸ್ಟರ್ ಅಮೀತ ಶಾ ಆದೇಶ ಮೇರೆಗೆ ಸಿಬಿಐಗೆ ಕೊಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!