ಸಿಂದಗಿ ಜನತೆಯನ್ನ ಬೆಚ್ಚಿಬೀಳಿಸಿದ್ದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಕಿಲ್ಲರ್ಸ್ ಅರೆಸ್ಟ್

1016

ಪ್ರಜಾಸ್ತ್ರ ಅಪರಾಧ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಜನತೆಯನ್ನ ಬೆಚ್ಚಿ ಬೀಳಿಸಿದ್ದ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಹತ್ಯೆಯ ಆರೋಪಿಗಳನ್ನ ಬಂಧಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ನಡೆದ ಘಟನೆ ಇಡೀ ತಾಲೂಕಿನ ಜನತೆಯನ್ನ ಅಕ್ಷರಶಃ ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು.

ಬಬಲೇಶ್ವರದ 28 ವರ್ಷದ ಅನಿಲ ಜಟ್ಟೆಪ್ಪ ಬರಗಾಲ, 17 ವರ್ಷದ ಲಕ್ಷ್ಮಣ ಪರಶುರಾಮ ಪೂಜಾರಿ ಹಾಗೂ 21 ವರ್ಷದ ದಯಾನಂದ ಸಿದ್ದಪ್ಪ ಹೊಸನಿ ಅನ್ನೋ ಮೂವರು ಆರೋಪಿಗಳನ್ನ ಅಕ್ಟೋಬರ್ 22ರಂದು ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಬಂಧಿಸಲಾಗಿದೆ. ಹತ್ಯೆಯ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದು, ಆ ವೇಳೆ ಬಳಿಸಿದ್ದ ಬೈಕ್ ನ್ನ ಸಹ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಘಟನೆ ಹಿನ್ನೆಲೆ:

ಕಳೆದ ಆಗಸ್ಟ್ 25ರ ಬೆಳಗಿನ ಜಾವ 1.45ರ ಸುಮಾರಿಗೆ ಪಟ್ಟಣದ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ 24 ವರ್ಷದ ರಾಹುಲ ಖೀರು ರಾಠೋಡ ಎಂಬಾತನನ್ನ ಹತ್ಯೆ ಮಾಡಲಾಗಿತ್ತು. ಮದಭಾವಿ ತಾಂಡಾ ನಿವಾಸಿಯಾಗಿದ್ದ ಈತ ಸಿಂದಗಿಯಲ್ಲಿ ರೂಮ್ ಮಾಡಿಕೊಂಡು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ. ಇದೀಗ ಈ ಘಟನೆ ಸಂಬಂಧ ಮೂವರನ್ನ ಬಂಧಿಸಲಾಗಿದೆ.

ಈ ಒಂದು ಕಾರ್ಯಾಚರಣೆಯಲ್ಲಿ ಸಿಪಿಐ ಹೆಚ್.ಎಂ ಪಾಟೀಲ, ಪಿಎಸ್ಐ ಹೆಚ್.ಎಸ್ ಹೊಸಮನಿ, ಮಹಿಳಾ ಪಿಎಸ್ಐ ಎ.ಎನ್ ಗೊಡ್ಡೊಡಗಿ, ಎಎಸ್ಐ ಎಸ್.ಡಿ ಭಾವಿಕಟ್ಟಿ, ಎಸ್.ಬಿ ಉಮರಾಣಿ, ಜಿ.ಎಸ್ ಗಲಗಲಿ, ಹೆಚ್.ಎಸ್ ಬಗಲಿ, ಎಸ್.ಪಿ ಹುಣಸಕಟ್ಟಿ, ಎಸ್.ಎಸ್ ನಾಟೀಕಾರ, ಕೆ ಉಮನಾಳ, ಚಿದಾನಂದ ತೋಳಮಟ್ಟಿ, ಬಿ.ಜಿ ಮುಳಸಾವಳಗಿ, ಎಸ್.ಕೆ ಯಾಳಸಂಗಿ, ವಿ.ಆರ್ ರಾಠೋಡ, ಎಸ್.ಎಸ್ ಕೊಂಡಿ, ಎ.ಎಂ ತಳವಾರ, ಎಸ್.ಕೆ ಗಂಗನಹಳ್ಳಿ, ಎಸ್.ಬಿ ಹಿರೇಮಠ, ಕೆ.ಉಕಮನಾಳ, ಪಿ.ಕೆ ನಾಗರಾಳ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!