ಸರ್ಜಾ ಕುಟುಂಬಕ್ಕೆ ಜೂ.ಚಿರು ಆಗಮನ

261

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸರ್ಜಾ ಹಾಗೂ ಮೇಘನಾರಾಜ್ ಕುಟುಂಬದಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ನಟಿ ಮೇಘನರಾಜ್ ಹಾಗೂ ದಿವಂಗತ ಚಿರಂಜೀವಿ ಸರ್ಜಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಆಗಮನವಾಗಿದೆ ಅನ್ನೋ ಖುಷಿ ಮೂಡಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ನಟ ಚಿರಂಜೀವಿ ಸರ್ಜಾ ತೀರಿಕೊಂಡ್ಮೇಲೆ ಎರಡೂ ಕುಟುಂಬದಲ್ಲಿ ದುಃಖ ಮಡುಗಟ್ಟಿತ್ತು. ಇದೀಗ ಒಂದಿಷ್ಟು ಸಮಾಧನ ಸಿಕ್ಕಿರಬಹುದು. ಮಗುವಿನ ರೂಪದಲ್ಲಿ ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಅನ್ನೋ ನಂಬಿಕೆ ಎಲ್ಲರಿದ್ದು, ಅಭಿಮಾನಿಗಳು, ಬಂಧು ಮಿತ್ರರು ಶುಭ ಕೋರುತ್ತಿದ್ದಾರೆ.

ಚಿರು-ಮೇಘನಾ ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಮಗು ಜನಿಸಿರುವುದು ಮತ್ತೊಂದು ಖುಷಿಗೆ ಕಾರಣವಾಗಿದೆ. ತಮ್ಗೆ ಗಂಡು ಮಗುವಾಗಲಿದೆ ಎಂದು ಚಿರಂಜೀವಿ ಪತ್ನಿ ಮುಂದೆ ಹೇಳಿದ್ರಂತೆ. ಅದನ್ನ ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ರು. ಇನ್ನು ನಟ ಹಾಗೂ ಸಹೋದರ ಧೃವ ಸರ್ಜಾ, ಅಣ್ಣನ ಆಗಮನವಾಗಿದೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!