ಚಿರು ಕಣ್ಮರೆಯಾಗಿ 2 ವರ್ಷ.. ಮೇಘನಾ ಭಾವುಕ ಬರಹ..

292

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ 2020 ನಿಜಕ್ಕೂ ಕರಾಳ ವರ್ಷ ಎನ್ನಬಹುದು. ಆ ವರ್ಷದಲ್ಲಿ ಯುವ ಪ್ರತಿಭಾನ್ವಿತ ನಟರು ಸೇರಿದಂತೆ ಹಿರಿಯ ನಟ, ನಟಿಯರನ್ನು ಕಳೆದುಕೊಂಡಿತು. ಅದರಲ್ಲಿ ಚಿರು ಸರ್ಜಾ ಸಹ ಒಬ್ಬರು. ಜೂನ್ 7ಕ್ಕೆ ಚಿರು ನಿಧನರಾಗಿ 2 ವರ್ಷ ಕಳೆದಿದೆ.

ಇಂದು ಪತ್ನಿ ಮೇಘನಾ ರಾಜ್, ಸಹೋದರ ಧ್ರುವ್ ಸರ್ಜಾ, ಪತ್ನಿ ಪ್ರೇರಣಾ, ಮಾವ ಅರ್ಜುನ್ ಸರ್ಜಾ, ಮೇಘನಾ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ಸೇರಿದಂತೆ ಕುಟುಂಬಸ್ಥರು, ಕನಕಪುರ ರಸ್ತೆಯ ನಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

ಪತಿಯನ್ನು ಕಳೆದುಕೊಂಡಿರುವ ಮೇಘನಾ ರಾಜ್, ಇನ್ಸ್ಟಾಗ್ರಾಮ್ ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. ನೀವು ಮತ್ತು ನಾನು ಶಾಶ್ವತವಾಗಿ. ನಿನ್ನಂತೆ ಯಾರೂ ಇರಲಿಲ್ಲ ಮತ್ತು ನಿಮ್ಮಂತೆ ಯಾರೂ ಇರುವುದಿಲ್ಲ. ಚಿರು ನೀವು ಒಬ್ಬರೆ ಮತ್ತು ಏಕೈಕ. ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!