‘ಸಿಂದಗಿ ಕೆರೆಗೆ ದಿ.ಎಂ.ಸಿ ಮನಗೂಳಿ ಹೆಸರು ಬೇಡ’

451

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಿಂದಗಿ ಕೆರೆಗೆ ಮಾಜಿ ಸಚಿವ ದಿವಂಗತ ಎಂ.ಸಿ ಮನಗೂಳಿ ಅವರ ಹೆಸರು ಇಡುವುದು ಬೇಡ. ಬದಲಿಗೆ ಗದುಗಿನ ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಹೇಳಿದ್ರು.

ಪಟ್ಟಣದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅವರು, ಸಿಂದಗಿ ಕೆರೆಯ ಅಭಿವೃದ್ಧಿಯ ಹಿಂದೆ ಆರ್.ಬಿ ಚೌಧರಿ, ಶರಣಪ್ಪ ಸುಣಗಾರ, ಎಂ.ಸಿ ಮನಗೂಳಿ ಅವರ ಕೆಲಸವಿದೆ. ಆದ್ರೆ, ಕೆರೆಗೆ ರಾಜಕಾರಣಿಗಳ ಹೆಸರು ಇಡುವುದು ಬೇಡ. ಪುರಸಭೆ ಅಧ್ಯಕ್ಷರಾಗಿರುವ ಡಾ.ಶಾಂತವೀರ ಮನಗೂಳಿ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರ ತಂದೆಯವರ ಹೆಸರು ಇಡುವುದರ ಬದಲು, ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಕೆರೆ ಎಂದು ನಾಮಕರಣ ಮಾಡಬೇಕು ಅಂತಾ ಒತ್ತಾಯಿಸಿದ್ರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಮಾತ್ನಾಡಬೇಕಾದ ಬಿಜೆಪಿಯ ಸದಸ್ಯರೆ ಸುದ್ದಿಗೋಷ್ಠಿಯಲ್ಲಿ ಇರಲಿಲ್ಲ. ಅವರಿಗೆ ತಿಳಿಸಿದ್ದೇವೆ. ಅವರು ಮಾತ್ನಾಡುತ್ತಾರೆ ಅನ್ನೋ ಹರಿಕೆ ಉತ್ತರ ನೀಡಿದರು.

ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತ್ನಾಡಿ, ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿವೆ. ರಸ್ತೆ, ಚರಂಡಿ ಕೆಲಸ ಕಳಪೆಯಾಗಿದೆ. ಪುರಸಭೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಸಬೇಕು ಎಂದು ಆರೋಪಗಳ ಸುರಿಮಳೆ ಸುರಿಸಿದರು. ಆದ್ರೆ, ಕೆರೆಗೆ ಮನಗೂಳಿ ಅವರ ಹೆಸರು ಬೇಡ ಅನ್ನೋ ಮಂಡಲ ಅಧ್ಯಕ್ಷರು ಹಾಗೂ ಬಿಜೆಪಿ ಸದಸ್ಯರ ಮಾತಿನ ಕುರಿತು ಮಾತ್ನಾಡ್ಲಿಲ್ಲ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಒಲ್ಲದ ಮನಸ್ಸಿನಿಂದ ಹೇಳಿದವರಂತೆ ಮಂಡಲ ಅಧ್ಯಕ್ಷರ ಅಭಿಪ್ರಾಯವೇ ನಮ್ಮ ಅಭಿಪ್ರಾಯವೆಂದರು.

ಈ ವೇಳೆ ಕೆಡಿಪಿ ಸದಸ್ಯರಾದ ಶಿವಕುಮಾರ ಬಿರಾದಾರ, ಅನಸುಬಾಯಿ ಪಾರಗೊಂಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಾ ಯಂಪೂರೆ, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ, ರಾಕೇಶ ಕಂಟಗೊಂಡ, ಎಂ.ಎಸ್ ಮಠ, ಮಲ್ಲು ಪೂಜಾರಿ, ಗುರು ತಳವಾರ, ಸುದರ್ಶನ ಜಿಂಗಾಣಿ ಸೇರಿದಂತೆ ಹಲವರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!