ಪೌರತ್ವದ ಬಗ್ಗೆ ಶಾಸಕರ ಮೌನ ಸಮ್ಮತಿಯಂತಿದೆ: ಅಕ್ಬರ ಮುಲ್ಲಾ

391

ಸಿಂದಗಿ: ಪಟ್ಟಣದ 23 ವಾರ್ಡ್ ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಎಸ್ಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡ್ತಿರುವುದಾಗಿ ಜಿಲ್ಲಾಧ್ಯಕ್ಷರಾದ ಅಕ್ಬರ ಮುಲ್ಲಾ ಹೇಳಿದ್ರು. ಈ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ ಮಾತ್ನಾಡಿದ ಅವರು, ಕಳೆದ ಎರಡ್ಮೂರು ಚುನಾವಣೆಗಳಲ್ಲಿಯೇ ಭಾಗವಹಿಸಬೇಕಾಗಿತ್ತು. ಆದ್ರೆ, ಸಾಧ್ಯವಾಗಿರ್ಲಿಲ್ಲ. ಈ ಬಾರಿ ಸ್ಪರ್ಧಿಸ್ತಿದ್ದೇವೆ ಅಂತಾ ತಿಳಿಸಿದ್ರು.

ವಾರ್ಡ್ ನಲ್ಲಿ ಸರ್ವೇ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ನವರಿಗೆ ಛೀಮಾರಿ ಹಾಕ್ತಿದ್ದಾರೆ. ಇವರ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ನಾವು ಬೆಂಬಲ ನೀಡಿ ಗೆಲ್ಲಿಸಿದ ಶಾಸಕರು ಪೌರತ್ವದ ಬಗ್ಗೆ ಮೌನದಿಂದ ಇರೋದು ನೋಡಿದ್ರೆ ಮೌನಂ ಸಮ್ಮತಿ ಲಕ್ಷಣಂ ಅಂದಂತಿದೆ. ಇದು ಮತದಾರರಿಗೆ ತಿಳಿದಿದ್ದು ಬಿಎಸ್ಪಿಗೆ ಬೆಂಬಲಿಸಲಿದ್ದಾರೆ ಎಂದರು.

ಬಿಎಸ್ಪಿ ಜಿಲ್ಲಾ ಸಂಯೋಜಕರಾದ ವಿರೂಪಾಕ್ಷ ಗುಬ್ಬೇವಾಡ ಮಾತ್ನಾಡಿ, ಪಕ್ಷದ ಕಾರ್ಯಕರ್ತರು, ಆಪ್ತರು ಚುನಾವಣೆಗೆ ಸಜ್ಜಾಗಿದ್ದಾರೆ. ಕಾಂಗ್ರೆಸ್ ನ ಮಾಜಿ ಶಾಸಕರೇ ಲೂಟಿ ಕೋರರಿಗೆ ಟಿಕೆಟ್ ನೀಡುವುದಿಲ್ಲವೆಂದು ಹೇಳಿದ್ದಾರೆ. ಶಾಸಕರು ಸಿಎಎ ಬಗ್ಗೆ ತುಟಿ ಬಿಚ್ಚಿಲ್ಲ. ದಲಿತರು, ಹಿಂದೂಳಿದವರು, ಅಲ್ಪಸಂಖ್ಯಾತರು ಸೇರಿ ಅವರನ್ನ ಗೆಲ್ಲಿಸಿದ್ದೇವೆ. ಆದ್ರೆ, ಪೌರತ್ವದ ಬಗ್ಗೆ ಮೌನ ವಹಿಸಿರುವುದು ನೋಡಿದ್ರೆ ಅವರು ಅದರ ಪರವಾಗಿದ್ದಾರೆ ಅಂತಾ ಅನಿಸುತ್ತೆ. ಹೀಗಾಗಿ ಮತಾದರರು ಬಿಎಸ್ಪಿ ಬೆಂಬಲಿಸಲಿದ್ದಾರೆ ಎಂದರು.

ಬೆಳಗಾವಿ ವಿಭಾಗೀಯ ಸಂಯೋಜಕರಾದ ರಾಜು ಗುಬ್ಬೇವಾಡ, ಬಿಎಸ್ಪಿ ಮುಖಂಡರಾದ ಪರಶುರಾಮ ಕೂಚಬಾಳ, ಬಾಲಚಂದ್ರ ಚಲವಾದಿ, ಶ್ರೀನಾಥ ಹೊಸಮನಿ, ಕಂಠೀರವ, ಯಮನೂರಿ ಬೆಕಿನಾಳ ಸೇರಿದಂತೆ ಜಿಲ್ಲಾ, ತಾಲೂಕು ಕಮಿಟಿ ಕಾರ್ಯಕರ್ತರು, ಬಹುಜನ ಸಮಾಜದ ಬಂಧುಗಳು ಭಾಗವಹಿಸಿದ್ರು. ರವಿ ಹೊಳಿ ನಿರೂಪಿಸಿ, ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!