ಪಿಎಲ್ ಡಿ ಬ್ಯಾಂಕ್ ಎಲೆಕ್ಷನ್ ನಲ್ಲಿ ಅಂದರ್ ಬಾಹರ್!

528

ಸಿಂದಗಿ: ಪಟ್ಟಣದಲ್ಲಿರುವ ಸಿಂದಗಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಇಂದು ಭರ್ಜರಿಯಾಗಿ ಜಟಾಪಟಿ ನಡೆದಿದೆ. ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಸದಸ್ಯರಿಗೆ ಸರಿಯಾಗಿ ಮಾಹಿತಿ ನೀಡದೆ ಅಧ್ಯಕ್ಷರು, ಮ್ಯಾನೇಜರ್ ಸೇರಿ ಗೋಲ್ ಮಾಲ್ ನಡೆಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.

ಸಭೆಯಲ್ಲಿ ಎಲೆಕ್ಷನ್ ಬಗ್ಗೆ, ಕ್ಷೇತ್ರದ ಬಗ್ಗೆ, ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. 16 ಸಾವಿರ ಮತದಾರರನ್ನ ಕೈ ಬಿಟ್ಟು ತಾವು ಮಾತ್ರ ಅಧಿಕಾರಕ್ಕೆ ಬರಬೇಕೆಂದು ಸಾಲಗಾರರನ್ನ ಬಿನ್ ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಅಶೋಕ ಗಾಯಕವಾಡ ಮಾಡಿರುವ ಗಂಭೀರ ಆರೋಪ ಇಲ್ಲಿದೆ.

ಬ್ಯಾಂಕ್ ಮುಂದೆ ಜಮಾಯಿಸಿದ ಅನೇಕ ಸದಸ್ಯರು ಅಧ್ಯಕ್ಷ, ಮ್ಯಾನೇಜರ್ ಹಾಗೂ ಚುನಾವಣೆ ಅಧಿಕಾರಿ ವಿರುದ್ಧ ಧಿಕ್ಕಾರಗಳನ್ನ ಕೂಗಿದ್ರು. ಚುನಾವಣೆಯನ್ನ ಬಹಿಷ್ಕರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ರು. ಚುನಾವಣೆ ಅಧಿಕಾರಿಯೊಂದಿಗೆ ಸದಸ್ಯರ ಜಟಾಪಟಿ ಜೋರಾಗ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಅನ್ನೋದರ ಕುರಿತು ಮಾಹಿತಿ ಪಡೆದುಕೊಂಡ್ರು.

ಚುನಾವಣೆ ಅಧಿಕಾರಿಯೊಂದಿಗೆ ಮಾತಿನ ಚಕಮಕಿ

ನಾಮಪತ್ರ ಸಲ್ಲಿಸಲು ಜನವರಿ 23 ಕೊನೆಯ ದಿನವಾಗಿದೆ. ಆದ್ರೆ, ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರಗಳನ್ನ ಕೈ ಬಿಟ್ಟು ಕೊಟ್ಟಿ ಮತದಾರರ ಲಿಸ್ಟ್ ರೆಡಿ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕಚೇರಿಯಲ್ಲಿ ಚುನಾವಣೆ ಅಧಿಕಾರಿಯೊಂದಿಗೆ ಸದಸ್ಯರು ಮಾತಿನ ಜಟಾಪಟಿ ನಡೆಸಿದ ಘಟನೆ ನಡೆದಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!