ಚಂದನ ಶೆಟ್ಟಿ ವಿರುದ್ಧ ದೂರು ದಾಖಲು

319

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೋಲುಮಂಡೆ ಜಂಗಮದೇವ ಅನ್ನೋ ಹಾಡಿನ ಸಂಬಂಧ ರ್ಯಾಪರ್ ಚೆಂದನ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಈ ಹಾಡಿಗೆ ಸಂಬಂಧಿಸಿದಂತೆ ಮಲೆಮಹಾದೇಶ್ವರ ಭಕ್ತರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡ್ಮೂರು ದಿನಗಳ ಹಿಂದೆ ಕೋಲುಮಂಡೆ ಜಂಗಮದೇವ ಅನ್ನೋ ರ್ಯಾಪ್ ಸಾಂಗ್ ರಿಲೀಸ್ ಮಾಡಿದ್ರು. ಅದರಲ್ಲಿ ಶರಣೆ ಸಂಕಮ್ಮರನ್ನ ಅಶ್ಲೀಲವಾಗಿ ತೋರಿಸಲಾಗಿದೆ ಎಂದು ವಿವಾದ ಶುರುವಾಯ್ತು. ಹೀಗಾಗಿ ಚಂದನ ಶೆಟ್ಟಿ ಕ್ಷಮೆ ಕೇಳಿದ್ರು. ಯೂಟ್ಯೂಬ್ ನಿಂದ ವಿಡಿಯೋ ಸಹ ತೆಗೆದು ಹಾಕಲಾಯ್ತು. ಇದೀಗ ರ್ಯಾಪ್ ಸಿಂಗರ್ ವಿರುದ್ಧ ಕೇಸ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!