ವಿಶ್ವ ದಾಖಲೆ ಬರೆದ ಬೌಲರ್ ಆಂಡರ್ಸನ್

301

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೌತಾಂಪ್ಟನ್: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ವಿಶ್ವ ದಾಖಲೆ ಮಾಡಿದ್ದಾರೆ. ಪಾಕ್ ನ ಅಜರ್ ಅಲಿ ವಿಕೆಟ್ ಪಡೆಯುವ ಮೂಲಕ 600 ವಿಕೆಟ್ ಗಳ ಸರದಾರರಾಗಿದ್ದಾರೆ.

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ಬೌಲರ್ 600 ವಿಕೆಟ್ ಪಡೆದಿರುವುದು ಇದೆ ಮೊದಲು. ಅತೀ ಹೆಚ್ಚು ವಿಕೆಟ್ ಪಡೆದ ಸ್ಥಾನದಲ್ಲಿ ಆಂಡರ್ಸನ್ 4ನೇ ಸ್ಥಾನದಲ್ಲಿದ್ದಾರೆ. 800 ವಿಕೆಟ್ ಪಡೆದ ಶ್ರೀಲಂಕಾದ ಮುತ್ತಯ್ಯ ಮುರುಳೀದರ್ ಪ್ರಥಮ, 708 ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ ದ್ವಿತೀಯ ಹಾಗೂ 619 ವಿಕೆಟ್ ಪಡೆದ ಭಾರತದ ಅನಿಲ ಕುಂಬ್ಳೆ 3ನೇ ಸ್ಥಾನದಲ್ಲಿದ್ದಾರೆ.

ಇದೀಗ 4ನೇ ಸ್ಥಾನದಲ್ಲಿರುವ ಜೇಮ್ಸ್ ಆಂಡರ್ಸನ್, ವೇಗದ ಬೌಲರ್ 600 ವಿಕೆಟ್ ಪಡೆದಿರುವುದು ಇದೆ ಮೊದಲು. ಮೇಲಿನ ಟಾಪ್ 3 ಬೌಲರ್ ಗಳು ಸ್ಪೀನ್ ಬೌಲರ್ ಗಳಾಗಿದ್ದಾರೆ. ಹೀಗಾಗಿ ಆಂಡರ್ಸನ್ ವಿಶ್ವ ದಾಖಲೆಯಾಗಿದೆ.




Leave a Reply

Your email address will not be published. Required fields are marked *

error: Content is protected !!