ನಿತ್ಯ ಕುಡಿದು ಬರ್ತಿದ್ದ ಅಣ್ಣ: ಬಿಯರ್ ಬಾಟಲ್ ನಿಂದಲೇ ತಲೆ ಒಡೆದ ತಂಗಿ

267

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಪ್ರತಿ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡ್ತಿದ್ದ ವ್ಯಕ್ತಿಗೆ ಬಿಯರ್ ಬಾಟಲ್ ನಿಂದಲೇ ಹೊಡೆದಿರುವ ಘಟನೆ ನಗರದ ಸುಳ್ಳ ರಸ್ತೆಯಲ್ಲಿ ನಡೆದಿದೆ. ಅಣ್ಣನ ಕಿರುಕುಳದಿಂದ ರೋಸಿಹೋದ ತಂಗಿ ಬಿಯರ್ ಬಾಟಲ್ ನಿಂದಲೇ ಹಲ್ಲೆ ಮಾಡಿದ್ದಾಳೆ.

ಕುಡಿದು ಬಂದು ಗಲಾಟೆ ಮಾಡ್ತಿದ್ದ, ಹೊಡೆಯುತ್ತಿದ್ದ ಎಂದು ಮಹಿಳೆ ಹೇಳ್ತಾಳೆ. ಅಲ್ದೇ, ಅವನನ್ನ ಸಾಯಿಸ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಸ್ಥಳೀಯರು ಆಕೆಯನ್ನ ಸಮಾಧಾನ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಶ್ವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!