ಅಸಮರ್ಥ ನಾಯಕ ದೇಶ ಮುನ್ನಡೆಸ್ತಿದ್ದಾರೆ: ರಾಗಾ

240

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ಕಳೆದ 29 ದಿನಗಳಿಂದ ಹೋರಾಟ ಮಾಡ್ತಿದ್ದಾರೆ. ಇವರನ್ನ ಬೆಂಬಲಿಸಿ ಕಾಂಗ್ರೆಸ್ 2 ಕೋಟಿವರೆಗೂ ಸಹಿ ಸಂಗ್ರಹಿಸಿ ಇದನ್ನ ರಾಷ್ಟ್ರಪತಿಗಳಿಗೆ ನೀಡುವ ಮೂಲಕ ಮಧ್ಯಸ್ಥಿತಿಕೆ ವಹಿಸಿ ಎಂದು ಕೇಳಿಕೊಂಡಿದೆ.

ಈ ವೇಳೆ ಮೆರವಣಿಗೆ ಹೊರಟಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಯಾಂಕಾ ಗಾಂಧಿ ವಾದ್ರಾ ಸೇರಿ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸದ ರಾಹುಲ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸೇರಿ ಮೂವರು ನಾಯಕರು ರಾಷ್ಟ್ರಪತಿಗಳನ್ನ ಭೇಟಿಯಾಗಿ ವಿಜ್ಞಾಪನ ಪತ್ರ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ರಾಹುಲ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಅಸಮರ್ಥ ನಾಯಕರೊಬ್ಬರು ದೇಶವನ್ನ ಮುನ್ನಡೆಸ್ತಿದ್ದಾರೆ. ಹೀಗಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಕೃಷಿ ಕಾಯ್ದೆಯ ಬಗ್ಗೆ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಕಾಯ್ದೆಗಳನ್ನ ರದ್ದುಗೊಳಿಸುವ ತನಕ ರೈತರು ಮನೆಗೆ ಹೋಗುವುದಿಲ್ಲವೆಂದು ನಾನು ಪ್ರಧಾನಿಗೆ ತಿಳಿಸುತ್ತೇನೆ ಎಂದಿದ್ದಾರೆ.

ಶಾಂತಿಯುತವಾದ ಪ್ರತಿಭಟನೆ ಹತ್ತಿಕ್ಕುವುದು, ಲಾಠಿ ಬೀಸುವುದು ಅವರ ಮಾರ್ಗವಾಗಿದೆ. ಹೀಗಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇಲ್ಲ. ಅಸಮರ್ಥ ವ್ಯಕ್ತಿಯೊಬ್ಬರು ಇತರೆ ವ್ಯಕ್ತಿಗಳ ನಿಯಂತ್ರಣದಲ್ಲಿದ್ದಾರೆ. ಇದನ್ನ ದೇಶದ ಯುವಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ರಾಹುಲ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!