ವಿಜಯಪುರದಲ್ಲಿ 2ನೇ ಹಂತದ ಮತದಾನ: ಮತಗಟ್ಟೆಗೆ ಡಿಸಿ ಭೇಟಿ

280

ಪ್ರಜಾಸ್ತ್ರ ಸುದ್ದಿ

ಇಂಡಿ: ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ. ಇನ್ನು ಡಿಸೆಂಬರ್ 27ರಂದು 2ನೇ ಹಂತದ ಮತದಾನ ನಡೆಯಲಿದೆ. ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಚಡಚಣ ಹಾಗೂ ದೇವರ ಹಿಪ್ಪರಗಿ ಸೇರಿ ನಾಲ್ಕು ತಾಲೂಕುಗಳ ಗ್ರಾಮ ಪಂಚಾಯ್ತಿಗಳಿಗೆ ವೋಟಿಂಗ್ ನಡೆಯಲಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಇಂಡಿ ತಾಲೂಕಿನ ಹಿರೇರೂಗಿ ಸರ್ಕಾರಿ ಶಾಲೆ ಹಾಗೂ ಸಾಲೊಟಗಿ ಪಿಎಸ್ ನ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ಮತಗಟ್ಟೆಯ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿದ್ರು. ಈ ವೇಳೆ ಇಂಡಿ ಎಸಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿದ್ರು.




Leave a Reply

Your email address will not be published. Required fields are marked *

error: Content is protected !!