ಟೈಂ ಔಟ್ ಆಗಿ ಕೆಟ್ಟ ದಾಖಲೆ ಬರೆದ ಲಂಕಾ ಆಟಗಾರ

308

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ನಡುವೆ ವಿಶ್ವಕಪ್ ಟೂರ್ನಿಯ ಪಂದ್ಯ ನಡೆಯುತ್ತಿದೆ. ಈ ವೇಳೆ ಲಂಕಾ ಆಟಗಾರ ಏಂಜೆಲೋ ಮ್ಯಾಥೋಸ್ ಟೈಂ ಔಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದರು.

ಮ್ಯಾಥೋಸ್ ಕ್ರಿಸ್ ನಲ್ಲಿ ನಿಲ್ಲಲು 2 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ಟೈಂ ಔಟ್ ನೀಡಲಾಯಿತು. ಹೀಗಾಗಿ ಡಕ್ ಔಟ್ ಗೆ ಹೊರ ನಡೆದರು. ಇದರಿಂದ ಕೋಪಗೊಂಡ ಆಟಗಾರ ಹೆಲ್ಮೆಟ್, ಬ್ಯಾಟ್ ಎಸೆದು ಸಿಟ್ಟು ಹೊರ ಹಾಕಿದರು.

ಈ ವೇಳೆ ಲಂಕಾ 24.2 ಓವರ್ ಗಳಲ್ಲಿ135 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಮ್ಯಾಥೋಸ್ ಔಟ್ ಬಳಿಕ 5 ವಿಕೆಟ್ ಆಯಿತು. ಶಕೀಬ್ ಬೌಲಿಂಗ್ ಮಾಡುತ್ತಿದ್ದರು.




Leave a Reply

Your email address will not be published. Required fields are marked *

error: Content is protected !!