ಬೈಕಿನಲ್ಲಿ ತಾಯಿ ಮೃತದೇಹ ಸಾಗಿಸಿದ ಮಗ

288

ಪ್ರಜಾಸ್ತ್ರ ಸುದ್ದಿ

ಭೂಪಾಲ್: ಆಸ್ಪತ್ರೆಯವರ ಹೃದಯ ಹೀನ ನಡೆಯಿಂದಾಗಿ ಮಗನೊಬ್ಬ ತಾಯಿ ಮೃತದೇಹವನ್ನು ಬೈಕಿನಲ್ಲಿ ಸಾಗಿಸಿದ ಹೃದಯ ವಿದ್ರಾವಕ ಘಟನೆ, ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ. ಸರ್ಕಾರಿ ಜಿಲ್ಲಾಸ್ಪತ್ರೆಯವರು ವಾಹನ ನೀಡದ ಪರಿಣಾಮ 50ಕ್ಕೂ ಹೆಚ್ಚು ಕಿಲೋ ಮೀಟರ್ ಬೈಕ್ ನಲ್ಲಿ ತಾಯಿಯ ಶವ ಸಾಗಿಸಿದ್ದಾನೆ.

ಜೈಮಂತ್ರಿ ಯಾದವ್ ಅನ್ನೋರು ಎದೆ ನೋವು ಕಾಣಿಸಿಕೊಂಡಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾದ ಕಾರಣ, ಅನುಪ್ಪುರು ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಜಿಲ್ಲೆಯ ವೈದ್ಯಕೀಯ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾಳೆ.

ಮೃತದೇಹ ತೆಗೆದುಕೊಂಡು ಹೋಗಲು ಆಸ್ಪತ್ರೆಯಲ್ಲಿ ವಾಹನವಿಲ್ಲವೆಂದು ಹೇಳಿ ಆಂಬ್ಯುಲೆನ್ಸ್ ನೀಡಿಲ್ಲವಂತೆ. ಖಾಸಗಿ ವಾಹನ ವ್ಯವಸ್ಥೆ ಮಾಡಲು ನೋಡಿದರೆ ಅತಿಯಾದ ರೇಟಿನಿಂದಾಗಿ ಬೈಕ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಕಿಲೋ ಮೀಟರ್ ಮೃತದೇಹ ತೆಗೆದುಕೊಂಡು ಹೋಗಿದ್ದಾನೆ. ಈ ರೀತಿಯ ಘಟನೆಗಳು ಮಧ್ಯಪ್ರದೇಶದಲ್ಲಿ ಸಹಜವಾಗಿವೆ. ಇಲ್ಲಿ ಅಷ್ಟೊಂದು ವ್ಯವಸ್ಥೆ ಹಾಳಾಗಿದೆ. ಕಳೆದ ಜುಲೈ 11ರಂದು 8 ವರ್ಷದ ಬಾಲಕ ತನ್ನ 2 ವರ್ಷದ ಸಹೋದರನ ಶವ ತೆಗೆದುಕೊಂಡು ಹೋಗಲು ವಾಹನಕ್ಕಾಗಿ ಕಾಯುತ್ತಿದ್ದ ದೃಶ್ಯ ವೈರಲ್ ಆಗಿತ್ತು.




Leave a Reply

Your email address will not be published. Required fields are marked *

error: Content is protected !!