ತಂದೆ ಧ್ವನಿಯನ್ನ ಟ್ಯಾಟೂವಿನಲ್ಲಿ ಹಾಕಿಸಿಕೊಂಡ ಮಗಳು

408

ಅಮೆರಿಕ: ಇದು ತುಂಬಾ ಅಪರೂಪದ ವಿಚಾರ ಮತ್ತು ತಂದೆ ಬಗ್ಗೆ ಮಗಳಿಗಿದ್ದ ಪ್ರೀತಿಯನ್ನ ತೋರಿಸುತ್ತದೆ. ಅಮೆರಿಕದ ವಾಸಿಂಗ್ಟನ್ ಮೂಲದ ಮೈಕಲ್ ಗೊಟೋ ಅನ್ನೋ ವ್ಯಕ್ತಿ 2013ರಲ್ಲಿ ಲಿವರ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ರು. ತಂದೆಯನ್ನ ತುಂಬಾ ಪ್ರೀತಿಸ್ತಿದ್ದ ಮಗಳು, ಇದೀಗ ಅವರ ಧ್ವನಿಯ ಟ್ಯಾಟೂ ಹಾಕಿಸಿಕೊಂಡಿದ್ದಾಳೆ.

ಯ್ವೆಟ್ಟೆ ಮೂರೆ ಅನ್ನೋ ಯುವತಿ ತನ್ನ ತಂದೆಯ ಧ್ವನಿಯನ್ನ ಹೊಂದಿದ ಜೀವಂತ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದನ್ನ ಸೌಂಡ್ ವೇವ್ ಟ್ಯಾಟೂ ಅಂತಾನೆ ಕರೆಯಲಾಗುತ್ತೆ. ಸ್ಕಿನ್ ಮೊಷನ್ ಅನ್ನೋ ಆ್ಯಪ್ ಮೂಲಕ ಕೈ ಮೇಲಿನ ಟ್ಯಾಟೂ ಸ್ಕ್ಯಾನ್ ಮಾಡಿದ್ರೆ ಮೈಕಲ್ ಧ್ವನಿ ಕೇಳಿಸುತ್ತೆ.

Hi babies, Thank you.. I feel better already. I love you. I’ll see you when I get back to the house. Bye bye.. ಅನ್ನೋ ಮಾತನ್ನ ಮೈಕಲ್ ಸಾಯುವ ಮುನ್ನ ಹೇಳಿದ್ರು. ಅದನ್ನ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಅದೇ ಸಾಲುಗಳನ್ನ ಸೌಂಡ್ ವೇವ್ ಟ್ಯಾಟೂ ಮೂಲಕ ಬಿಡಿಸಲಾಗಿದೆ. ಈ ಮೂಲಕ ಮೈಕಲ್ ಮಗಳು ತನ್ನ ತಂದೆಯನ್ನ ಸದಾ ಜೀವಂತವಾಗಿರಿಸಿದ್ದಾಳೆ. ಇನ್ನು ಈ ರೀತಿಯ ಸೌಂಡ್ ವೇವ್ ಟ್ಯಾಟೊ ವಿದೇಶದಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!