ಗಂಗೂಲಿ ಲೈಫ್ ಸಿನಿಮಾಗೆ ಸೂಪರ್ ಸ್ಟಾರ್ ನಟನ ಪುತ್ರಿಯ ನಿರ್ದೇಶನ?

210

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೀವನಗಾಥೆ ಸಿನಿಮಾ ಆಗುತ್ತಿರುವುದು ಈ ಹಿಂದೆನೇ ತಿಳಿದಿದೆ. ಇದೀಗ ಆ ವಿಚಾರ ಮತ್ತೆ ಚರ್ಚೆಯಾಗುತ್ತಿದೆ. ಕಾರಣ ಸೂಪರ್ ಸ್ಟಾರ್ ನಟನ ಪುತ್ರಿ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದಕ್ಕೆ.

ಯೆಸ್, ಗಂಗೂಲಿ ಜೀವನ ಚರಿತ್ರೆ ಸಿನಿಮಾ ಮಾಡುವುದಕ್ಕೆ ಲವ್ ಫಿಲ್ಮ್ಸ್ ಸಂಸ್ಥೆ ಮುಂದೆ ಬಂದಿದೆ ಎಂದು ಗಂಗೂಲಿ ಸ್ವತಃ ಟ್ವೀಟ್ ಮಾಡಿದ್ದರು. ನಿರ್ದೇಶಕ ಲವ್ ರಂಜನ್ ಒಡೆತನದ ಸಂಸ್ಥೆಯಿಂದ ಸಿನಿಮಾ ನಿರ್ಮಾಣವಾಗುತ್ತಿದೆ ಅಂತಾ ತಿಳಿಸಿದ್ದರು. ಈ ಚಿತ್ರವನ್ನು ಸೂಪರ್ ಸ್ಟಾರ್ ನಟನ ಪುತ್ರಿ ನಿರ್ದೇಶನ ಮಾಡಲಿದ್ದಾರಂತೆ.

‘3’ ಅನ್ನೋ ಚಿತ್ರದಲ್ಲಿನ ವೈ ದಿಸ್ ಕೊಲವರಿ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. 2010ರಲ್ಲಿ ಬಂದ ಈ ಚಿತ್ರದ ಹಾಡು ಇಡೀ ದೇಶದಲ್ಲಿ ಸದ್ದು ಮಾಡುತ್ತು. ನಟ ಧನುಷ್ ನಟನೆಯ ಚಿತ್ರವನ್ನು ನಿರ್ದೇಶನ ಮಾಡಿದ್ದು ಅವರ ಮಾಜಿ ಪತ್ನಿ, ರಜನಿ ಪುತ್ರಿ ಐಶ್ವರ್ಯ. ಮುಂದೆ ವೈ ರಾಜಾ ವೈ, ಸಿನಿಮಾ ವೀರನ್ ಅನ್ನೋ ಸಾಕ್ಷ್ಯಚಿತ್ರ ಸಹ ನಿರ್ದೇಶನ ಮಾಡಿದರು. ಈಗ ಗಂಗೂಲಿ ಜೀವನಗಾಥೆಯ ಚಿತ್ರವನ್ನು ಐಶ್ವರ್ಯ ನಿರ್ದೇಶನ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.




Leave a Reply

Your email address will not be published. Required fields are marked *

error: Content is protected !!