ಏನಿದು ಕ್ರಾಶ್ ಡಯಟ್?

241

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದು, ಹಲವರ ನಿದ್ದೆ ಕೆಡಿಸಿದ ನಟಿಯರಲ್ಲಿ ಶ್ರೀದೇವಿ ಸಹ ಒಬ್ಬರು. ತನ್ನ ಸೌಂದರ್ಯದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ನಟಿ ಶ್ರೀದೇವಿ ನಿಧನರಾಗಿ 5 ವರ್ಷ ಕಳೆದಿದೆ. ಈಗ ನಟಿಯ ಸಾವಿನ ರಹಸ್ಯವೊಂದು ಹೊರ ಬಿದ್ದಿದೆ.

ಹೌದು, ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಹೇಳಿದ ಮಾತು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪತ್ನಿಯ ಸಾವು ಸಹಜವಲ್ಲ. ಅದೊಂದು ಅಪಘಾತ. ಇದರ ಬಗ್ಗೆ ನಾನು 24, 44 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದಾಗ ಮಾತನಾಡಿದ್ದೇನೆ. ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಯ ಪ್ರಕಾರ ಇದು ಸಹಜ ಸಾವಲ್ಲ ಎಂದಿದೆ. ಸಾಕಷ್ಟು ಉಪವಾಸದಿಂದಾಗಿ ಕಡಿಮೆ ರಕ್ತದೊತ್ತಡದಿಂದ ಬ್ಲಾಕ್ ಔಟ್ ಅನುಭವಿಸುತ್ತಿದ್ದರು. ಶೂಟಿಂಗ್ ನಲ್ಲಿ ಮೂರ್ಚೆ ಹೋಗಿ ಬಿದ್ದಿರುವ ಕುರಿತು ನಟ ನಾಗಾರ್ಜುನ್ ಸಹ ಮಾಹಿತಿ ನೀಡಿದ್ದರು. ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ಕಟ್ಟುನಿಟ್ಟಿನ ಡಯಟ್ ಮಾಡುತ್ತಿದ್ದರು. ಊಟಕ್ಕೆ ಉಪ್ಪು ಸೇರಿಸಲು ವೈದ್ಯರು ಹೇಳಿದರೂ ಸಹ ಗಂಭೀರವಾಗಿ ತೆಗೆದುಕೊಳ್ಳದೆ ಕ್ರಾಶ್ ಡಯಟ್ ಮಾಡುತ್ತಿದ್ದರು. ಕ್ರಾಶ್ ಡಯಟ್ ನಿಂದಾಗಿ ದುರಂತ ಸಂಭವಿಸುವಂತಾಯಿತು ಎಂದು ಬೋನಿ ಕಪೂರ್ ಹೇಳಿದ್ದಾರೆ.

ನಟಿ ಶ್ರೀದೇವಿ ಮತ್ತು ಪತಿ ಬೋನಿ ಕಪೂರ್

ಇವತ್ತಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರಿಗೂ ಬೊಜ್ಜು ಬರುತ್ತಿದೆ. ಸಣ್ಣ ವಯಸ್ಸಿನಲ್ಲಿ ಒಂದಲ್ಲ ಒಂದು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅನೇಕರು ಡಯಟ್ ಮೊರೆ ಹೋಗುತ್ತಾರೆ. ಡಯಟ್ ನಲ್ಲಿಯೂ ನಾನಾ ರೀತಿಯ ಇವೆ. ಇದರಲ್ಲಿ ಕ್ರಾಶ್ ಡಯಟ್ ಸಹ ಒಂದು.

ಏನಿದು ಕ್ರಾಶ್ ಡಯಟ್?

ಸಧ್ಯ ತೀವ್ರ ಚಾಲ್ತಿಯಲ್ಲಿರುವುದು ಕ್ರಾಶ್ ಡಯಟ್. ಇದು ಅತಿ ಹೆಚ್ಚಾಗಿ ಕಂಡು ಬರುವುದು ಹೈಪ್ರೊಫೈಲ್ ವರ್ಗದಲ್ಲಿ. ಸ್ಲಿಮ್ ಅಂಡ್ ಬ್ಯೂಟಿಫುಲ್ ಕಾಣಲು ಯುವತಿಯರು, ಮಹಿಳೆಯರು ಕ್ರಾಶ್ ಡಯಟ್ ಮೊರೆ ಹೋಗುತ್ತಾರೆ. ಕ್ರಾಶ್ ಡಯಟ್ ಅಂದರೆ ಅತಿ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳುವುದು. ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ ಎಷ್ಟು ಪ್ರಮಾಣದ ಕ್ಯಾಲೋರಿ ಬೇಕಾಗುತ್ತೋ ಅದರ ಅರ್ಧಕ್ಕಿಂತ ಕಡಿಮೆ ಕ್ಯಾಲೋರಿ ಆಹಾರ ಸೇವಿಸುವುದಾಗಿದೆ.

ಒಬ್ಬ ಮನುಷ್ಯನಿಗೆ ದಿನಕ್ಕೆ ಸುಮಾರು 2500 ಕ್ಯಾಲೋರಿ ಬೇಕಾಗುತ್ತೆ. ಕ್ರಾಶ್ ಡಯಟ್ ಗೆ ಬಂದರೆ ಅದು 700-900 ಕ್ಯಾಲೋರಿಗೆ ಬಂದು ನಿಲ್ಲುತ್ತೆ. ಹೀಗಾಗಿ ಆಹಾರ ಸೇವನೆ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ವಾರದಲ್ಲಿ 3-4 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ, ಇದೇ ನಮ್ಮ ಜೀವಕ್ಕೆ ಅಪಾಯ ತರುತ್ತೆ ಅನ್ನೋದು ಗೊತ್ತಿಲ್ಲ. ನಿಧನವಾಗಿಯಾದರೂ ತೂಕ ಇಳಿಯಲಿ, ಯಾವುದೇ ಕಾರಣಕ್ಕೆ ಅಪಾಯಕಾರಿ ಡಯಟ್ ಮಾತ್ರ ಮಾಡಬಾರದು.




Leave a Reply

Your email address will not be published. Required fields are marked *

error: Content is protected !!