ನಿರ್ದೇಶಕ ರಾಜಮೌಳಿ ಸೇರಿ ಕುಟುಂಬಸ್ಥರಿಗೆ ಸೋಂಕು

299

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ಜಗತ್ತಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಸೇರಿದಂತೆ ಅವರ ಕುಟುಂಬಸ್ಥರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವೈದ್ಯರ ಸಲಹೆ ಮೇರೆಗೆ ಹೋಮ್ ಕ್ವಾರಂಟೈನ್ ಆಗಿರುವುದಾಗಿ ಹೇಳಿದ್ದಾರೆ.

ಈ ಮೊದ್ಲು ನಮ್ಗೆ ಜ್ವರ ಕಾಣಿಸಿಕೊಂಡಿತು. ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದಿದ್ವಿ. ಜ್ವರ ಕಡಿಮೆಯಾಗಿತ್ತು. ಕೋವಿಡ್ 19ನ ಲಕ್ಷಣಗಳು ಇಲ್ಲದಿದ್ರೂ ಪರೀಕ್ಷೆ ಮಾಡಿಸಿಕೊಂಡಿದ್ದೇವು. ಇದೀಗ ಅದರ ವರದಿ ಬಂದಿದ್ದು, ಪಾಸಿಟಿವ್ ಎಂದು ಇದೆ. ಹೀಗಾಗಿ ಹೋಂ ಕ್ವಾರಂಟೈನ್ ಆಗಿದ್ದೇವೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ನಿಂದಾಗಿ ರಾಜಮೌಳಿ ನಿರ್ದೇಶನ ಬಿಗ್ ಬಜೆಟ್ ಆರ್ ಆರ್ ಆರ್ ಮೂವಿ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಅದರಲ್ಲಿ ತೊಡಗಿಸಿಕೊಳ್ಳುವಷ್ಟರಲ್ಲಿ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಇದರ ಕೆಲಸ ಸ್ವಲ್ಪ ದಿನಗಳ ಕಾಲ ಮತ್ತೆ ಮುಂದಕ್ಕೆ ಹೋಗಲಿದೆ.




Leave a Reply

Your email address will not be published. Required fields are marked *

error: Content is protected !!