2ನೇ ರ್ಯಾಂಕ್ ವಿದ್ಯಾರ್ಥಿನಿ 1 ಅಂಕಕ್ಕಾಗಿ ಅರ್ಜಿ.. ಜಸ್ಟ್ ಪಾಸ್ ವಿದ್ಯಾರ್ಥಿಗೆ ಕಟೌಟ್ ಸನ್ಮಾನ

341

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಲ್ಲಿ ಎರಡು ವಿಭಿನ್ನ ಸ್ಟೋರಿಗಳಿವೆ. 1 ಅಂಕಕ್ಕಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮುಂದಾದ ವಿದ್ಯಾರ್ಥಿನಿ. ಇನ್ನೊಂದ್ಕಡೆ ಕೇವಲ 48.64 ಅಂಕ ಪಡೆದ ವಿದ್ಯಾರ್ಥಿಗೆ ಭರ್ಜರಿ ಸನ್ಮಾನ. ಬೈಂದೂರಿನ ಸುರಭಿ ಶೆಟ್ಟಿ 625ಕ್ಕೆ 624 ಅಂಕ ಪಡೆದಿದ್ದಾಳೆ. ಬೆಳಗಾವಿಯ ಸಮರ್ಥ ಗೋವಿಲಕರ್ ಶೇಕಡ 48.64 ಅಂಕ ಪಡೆದಿದ್ದಾನೆ.

ಸುರಭಿಗೆ 625ಕ್ಕೆ 624 ಅಂಕ ಬಂದಿರುವುದು ಸಾಮಾನ್ಯದ ಸಂಗತಿ ಅಲ್ಲವೇ ಅಲ್ಲ. ಹೀಗಿದ್ರೂ ಸಮಾಜ ವಿಜ್ಞಾನದಲ್ಲಿ 1 ಅಂಕ ಕಡಿಮೆ ಬಂದಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ ಎನ್ನುತ್ತಿದ್ದಾಳೆ.

ಇತ್ತ ಈ ಹುಡ್ಗರು ಜಸ್ಟ್ ಪಾಸ್ ಆಗಿರುವುದೇ ದೊಡ್ಡ ಸಾಧನೆ ಎಂದುಕೊಂಡು ಖುಷಿಯಾಗಿದ್ದಾರೆ. ಆತನ ಏರಿಯಾದ ಹುಡುಗರು ಕಟೌಟ್ ಮಾಡಿಸಿ, ಮುಖಕ್ಕೆ ಬಣ್ಣ ಹಚ್ಚಿ, ಸನ್ಮಾನ ಮಾಡಿ ಎಂಜಾಯ್ ಮಾಡಿದ್ದಾರೆ. ಬ್ಯಾನರ್ ನಲ್ಲಿ 48 ಚಿಕ್ಕದು ಮಾಡಿ, 64 ದೊಡ್ಡದು ಮಾಡಿ ಕುಣಿದಾಡಿದ್ದಾರೆ.

ಇವರಲ್ಲಿರುವ ಆತ್ಮಸ್ಥೈರ್ಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳಲ್ಲಿಯೂ ಬರಬೇಕು. ಉದ್ಯೋಗಕ್ಕೆ ಅಂಕ ಮಾನದಂಡವಾಗಿರಬಹುದು, ಆದ್ರೆ, ಬದುಕಿಗಲ್ಲ.




Leave a Reply

Your email address will not be published. Required fields are marked *

error: Content is protected !!