ಮಂತ್ರಿಗಿರಿಯಲ್ಲಿ ಮುಂದುವರೆದ ಜಾತಿ, ಪ್ರಾದೇಶಿಕ ಅಸಮಾನತೆ

337

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಬುಧವಾರ 29 ಜನ ಸಚಿವರು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಳೆದ ಹಲವು ದಿನಗಳಿಂದ ಮಂತ್ರಿ ಪದವಿಗಾಗಿ ನಡೆದಿದ್ದ ಪಾಲಿಟ್ರಿಕ್ಸ್ ಮುಗಿದಿದೆ. ಸಚಿವ ಸ್ಥಾನ ಸಿಗದವರ ಅಸಮಾಧಾನ ಶುರುವಾಗಿದೆ. ಇದರ ಜೊತೆಗೆ ಬಿಜೆಪಿ ಪ್ರಾದೇಶಿಕ ಸಮಾನತೆ ಹಾಗೂ ಜಾತಿ ಸಮಾನತೆ ವಿಚಾರದಲ್ಲಿ ಅಹಿಂದ ವರ್ಗಕ್ಕೆ ಪದೆಪದೆ ಮೋಸ ಮಾಡುತ್ತೆ ಎಂದು ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಬುಧವಾರ ಸಚಿವ ಸಂಪುಟ ಸೇರಿದವರಲ್ಲಿ 10 ಜನ ಲಿಂಗಾಯತರು, 7 ಒಕ್ಕಲಿಗರು, 2 ಬ್ರಾಹ್ಮಣರು, 7 ಹಿಂದುಳಿದ ವರ್ಗ ಹಾಗೂ 1 ಎಸ್ ಟಿ ವರ್ಗದವರಿಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಬಿಜೆಪಿಯಲ್ಲಿ ಅಹಿಂದ ವರ್ಗದ ನಾಯಕರಿಗೆ ಅಧಿಕಾರ ನೀಡುವುದು ದೂರದ ಮಾತು ಅನ್ನೋ ಅಸಮಾಧಾನ ವ್ಯಕ್ತವಾಗುತ್ತಿದೆ.

ಇನ್ನು ಪ್ರಾದೇಶಿಕತೆ ವಿಚಾರಕ್ಕೆ ಬಂದರೆ 13 ಜಿಲ್ಲೆಗಳಲ್ಲಿ ಒಬ್ಬರೂ ಸಚಿವರಿಲ್ಲ. ವಿಜಯಪುರ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಹಾಸನ, ಕೋಲಾರ, ದಾವಣಗೆರೆ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ರಾಮನಗರ ಸೇರಿ 13 ಜಿಲ್ಲೆಗಳಲ್ಲಿ ಸಚಿವರೆ ಇಲ್ಲ. ಯಡಿಯೂರಪ್ಪ ಅವಧಿಯಲ್ಲಿ 14 ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈಗ 13 ಜಿಲ್ಲೆಗಳಿಗಿಲ್ಲ.

ಪ್ರಬಲ ಜಾತಿ, ವರ್ಗ, ಜಿಲ್ಲೆಗಳಿಗೆ ಮಾತ್ರ ಪದೆಪದೆ ಸಚಿವ ಸ್ಥಾನ ನೀಡಲಾಗ್ತಿದೆ. ಒಂದೇ ಜಿಲ್ಲೆಗೆ ಮೂರು ನಾಲ್ಕು ಸಚಿವ ಸ್ಥಾನ ನೀಡಲಾಗ್ತಿದೆ. ಆದ್ರೆ, ಇನ್ನುಳಿದ ಜಲ್ಲೆಗಳಿಗೆ ಒಬ್ಬೇ ಒಬ್ಬರಿಗೆ ಸಚಿವ ಸ್ಥಾನ ನೀಡದೆ ಇರುವುದು ಸ್ವತಃ ಬಿಜೆಪಿ ಕಾರ್ಯಕರ್ತರಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!