ತಮ್ಮನ ಮನೆಗೆ ಬೆಂಕಿ ಹಚ್ಚಿ ತಾನೂ ಸುಟ್ಟು ಬೂದಿಯಾದ ಅಣ್ಣ..

73

ಪ್ರಜಾಸ್ತ್ರ ಸುದ್ದಿ

ಕಾರ್ಕಳ: ಅಣ್ಣನೊಬ್ಬ ತಮ್ಮನ ಮನೆಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕೃಷ್ಣ ಸಪ್ಪಳಿಗ ಎಂಬಾತ ಈ ಕೃತ್ಯವೆಸಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಮ್ಮ ಶೇಖರ ಸಪ್ಪಳ ಮನೆಗೆ ಬುಧವಾರ ತಡರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಬೆಂಕಿ ಹಚ್ಚಿದ್ದಾನೆ. ನಂತರ ತನ್ನ ಓಮ್ನಿಯಲ್ಲಿ ಕುಳಿತು ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಜಮೀನು ವ್ಯಾಜ್ಯ ಕಾರಣವೆಂದು ಹೇಳಲಾಗುತ್ತಿದೆ.

ಈ ಕೃತ್ಯಕ್ಕೂ ಮೊದಲು ಕೃಷ್ಣ ಮನೆಯ ಕಾಂಪೌಂಡ್ ಗೆ ಡೆತ್ ನೋಟ್ ಅಂಟಿಸಿದ್ದಾನೆ. ಅದರಲ್ಲಿ ಕೆಲವರು ಹೆಸರು ಉಲ್ಲೇಖಿಸಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!