ಪ್ರಜಾಸ್ತ್ರ ಸುದ್ದಿ
ನವದೆಹಲಿ: ಇಂದಿನಿಂದ ಸುಪ್ರೀಂ ಕೋರ್ಟ್ ತೀರ್ಪುಗಳು ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿವೆ. ಗಣರಾಜ್ಯೋತ್ಸವದ ಪ್ರಯುಕ್ತ ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ತಿಳಿಸಿದ್ದಾರೆ.
ವಿವಿಧ ಸ್ಥಳೀಯ ಭಾಷೆಗಳಲ್ಲಿ ಉಚಿತವಾಗಿ ಒದಗಿಸುವ ಸೇವೆಯನ್ನು ಎಲೆಕ್ಟ್ರಾನಿಕ್ – ಸುಪ್ರೀಂ ಕೋರ್ಟ್ ರಿಪೋರ್ಟ್ಸ್(ಇ-ಎಸ್‌ಸಿಆರ್)ನ ಭಾಗವಾಗಿ ಗುರುವಾರ ಆರಂಭಿಸಲಾಗುತ್ತದೆ ಎಂದು ತಿಳಿಸಿದರು. ಸಂವಿಧಾನದ 8ನೇ ಪರಿಚ್ಛೇದಲ್ಲಿ ಸೇರಿರುವ ವಿವಿಧ ಭಾಷೆಗಳಲ್ಲಿ ಈ ತೀರ್ಪುವನ್ನು ಒದಗಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಸಾಕಷ್ಟು ಪರಿಶ್ರಮ ವಹಿಸಿದೆ ಎಂದರು.

ಸ್ಥಳೀಯ ಭಾಷೆಗಳ ಪೈಕಿ ತಮಿಳಿನಲ್ಲಿ ಅತೀ ಹೆಚ್ಚು ತೀರ್ಪುಗಳಿವೆ. ಅಂದರೆ 52 ತೀರ್ಪುಗಳಿವೆ. ಮಲಯಾಳ 29, ತೆಲುಗಿನಲ್ಲಿ 28, ಒರಿಯಾದಲ್ಲಿ 21, ಕನ್ನಡದ 17, ಮರಾಠಿ 14, ಮರಾಠಿಯಲ್ಲಿ 14, ಅಸ್ಸಾಮಿ ಮತ್ತು ಪಂಜಾಬಿ ಭಾಷೆಗಳಲ್ಲಿ 4, ಉರ್ದುವಿನಲ್ಲಿ ಮೂರು ತೀರ್ಪುಗಳಿವೆ. ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್‌ಜೆಡಿಜಿ)ನ ಜಡ್ಜ್ಮೆಂಟ್ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ. ಉಚಿತವಾಗಿ ಓದಬಹುದು.