ಸುಳ್ಳುಗಳ ಸೃಷ್ಟಿಕರ್ತ ಸಿಂದಗಿ ಕಸಾಪ ಅಧ್ಯಕ್ಷ

1849

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪ್ರಶಸ್ತಿ, ಸನ್ಮಾನ, ಗೌರವ ಅನ್ನೋದು ತಾನಾಗೆ ಹುಡುಕಿಕೊಂಡು ಬರಬೇಕು. ನಿಜವಾದ ಸಾಧಕರಿಗೆ ತಡವಾಗಿಯಾದ್ರೂ ಅದು ಖಂಡಿತ ಬರುತ್ತೆ. ಒಂದು ವೇಳೆ ಬರದೆ ಇದ್ರೂ ಅವರು ಅಡ್ಡ ದಾರಿ ಹಿಡಿಯುವುದಿಲ್ಲ. ಆದ್ರೆ, ಕೆಲ ದೀಡ್ ಪಂಡಿತರು ಇರ್ತಾರೆ ನೋಡಿ ಸ್ವಾಮಿ, ಪ್ರಶಸ್ತಿ, ಸನ್ಮಾನಕ್ಕಾಗಿ ಕಂಡಕಂಡವರ ಬಾಲ ಬಡೆಯುತ್ತಾರೆ. ತಪ್ಪಿದ್ರೆ ತಾವೇ ಪ್ರಶಸ್ತಿ ಸೃಷ್ಟಿಸಿಕೊಳ್ತಾರೆ.

ಇಷ್ಟೆಲ್ಲ ಪೀಠಿಕೆ ಯಾಕೆ ಅಂದ್ರೆ, ಕಾರಣ ಇಲ್ಲಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ವಿವಿಧ ಕ್ಷೇತ್ರಗಳ 20 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇದರಲ್ಲಿ ಸಿಂದಗಿ ಪಟ್ಟಣದ ಸರ್ಕಾರಿ ಶಾಲಾ ಶಿಕ್ಷಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಒಬ್ಬರು. ಇವರಿಗೆ ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಆದ್ರೆ, ಇವರಿಗೆ ಅದೇನಾಗಿದೆಯೋ ಏನು.. ಸಂಕೀರ್ಣ ವಿಭಾಗದಲ್ಲಿ ಪ್ರಶಸ್ತಿ ಬಂದಿರುವ ಹಾಗೇ ನಕಲಿ ಸರ್ಟಿಫಿಕೇಟ್ ಸಿದ್ಧಪಡಿಸಿಕೊಂಡಿದ್ದಾರೆ.

ಅಸಲಿ ಪ್ರಮಾಣ ಪತ್ರ

ಮಕ್ಕಳಿಗೆ ಒಳ್ಳೆಯ ದಾರಿಯ ಬಗ್ಗೆ ಹೇಳಬೇಕಾದ ಶಿಕ್ಷಕ, ಸಾಹಿತ್ಯ ಪರಿಷತ್ ಅಧ್ಯಕ್ಷ ಅನ್ನೋ ಉನ್ನತ ಹುದ್ದೆಯಲ್ಲಿದ್ದು, ಅದಕ್ಕೆ ಕಳಂಕ ತರುವಂತಹ ಕೆಲಸ ಮಾಡಿದ್ದಾರೆ. ಜಿಲ್ಲಾಡಳಿತ ಕೊಟ್ಟ ಪ್ರಶಸ್ತಿ ಪತ್ರದಲ್ಲಿ ಜಿಲ್ಲಾಧಿಕಾರಿಯೊಬ್ಬರ ಸಹಿ ಮಾತ್ರ ಇದೆ. ಆದ್ರೆ, ಚೌಧರಿ ಅವರು ಸೃಷ್ಟಿಸಿರುವ ಪ್ರಶಸ್ತಿ ಪತ್ರದಲ್ಲಿ ಮೂರು ಇಲಾಖೆಗಳ ಹೆಸರು, ಆಯಾ ಇಲಾಖೆ ಮುಖ್ಯಸ್ಥರ ಹೆಸರು ಇದೆ. ಸಹಿನೇ ಇಲ್ಲ. ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಎಂದು ಬರೆದಿರುವವರ ಹೆಸರು ಇಲ್ಲದ ಅಧಿಕಾರಿ ಹೆಸರಾಗಿದೆಯಂತೆ. ಇದರ ಜೊತೆಗೆ ಅಕ್ಷರ ದೋಷಗಳು ನೋಡಿದ್ರೆ ಕನ್ನಡ ಅಭಿಮಾನಿಗಳು ನೇಣು ಹಾಕಿಕೊಳ್ಳಬೇಕು.

ನಕಲಿ ಪ್ರಶಸ್ತಿ ಪತ್ರ ಸಿದ್ಧಮಾಡಿರುವ ಸಿದ್ಧಲಿಂಗ ಚೌಧರಿ ಅವರು ತಾಲೂಕಿನ ಜನರ ಕ್ಷಮೆಯಾಚಿಸಿ, ಕಸಾಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲದೆ ಹೋದ್ರೆ ಚೌಧರಿ ಹಾಗೂ ನಕಲಿ ಸರ್ಟಿಫಿಕೇಟ್ ಸಿದ್ಧಪಡಿಸಿರುವ ಶಿವಯೋಗಿ ಪ್ರಿಂಟರ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ.

ಚಂದ್ರಕಾಂತ ಸೊನ್ನದ, ಸಾಕ್ಷ್ಯಚಿತ್ರ ನಿರ್ದೇಶಕ, ಬೆಂಗಳೂರು

ಹೀಗೆ ಸಂಪೂರ್ಣವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರನ್ನ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ. ಇದು ಅಲ್ದೇ, ಆಡಿಯೋದಲ್ಲಿ ಹೇಳಿರುವ ‘ಮನದ ಮಂದಾರ’ ಅನ್ನೋ ಕೃತಿನೇ ಇಲ್ವಂತೆ.. ಗೋಲಗೇರಿ, ಕನ್ನೊಳ್ಳಿ, ಕಲಕೇರಿ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಯಾರ ಯಾರ ಬಳಿ ಎಷ್ಟೆಷ್ಟು ಹಣ ಲೂಟಿ ಮಾಡಲಾಗಿದೆ? ದತ್ತಿ ಉಪನ್ಯಾಸದ ಹೆಸರಿನಲ್ಲಿ ಪಡೆದ ಹಣವೆಷ್ಟು..?

ಮುಂದಿನ ಭಾಗದಲ್ಲಿ ನಿರೀಕ್ಷಿಸಿ..




Leave a Reply

Your email address will not be published. Required fields are marked *

error: Content is protected !!